ನವದೆಹಲಿ ನವೆಂಬರ್ 05:ದೇಶದ ಚುನಾವಣಾ ಆಯೋಗದ ಅಕ್ರಮಗಳನ್ನು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಇದೀಗ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ಕರ್ನಾಟಕದ ಒಂದು ಕ್ಷೇತ್ರದಲ್ಲಿ ನಡೆದ ಅಕ್ರಮ ಮತಗಳ ಕುರಿತಂತೆ ಮಾಹಿತಿ ನೀಡಿದ್ದ ಅವರು ಇದೀಗ ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ನಡೆ ಮತದಾನದ ಅಕ್ರಮವನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಬ್ರೆಜಿಲ್ ರೂಪದರ್ಶಿಯೊಬ್ಬರ ಫೋಟೊ ಬಳಸಿಕೊಂಡು ಬೇರೆ ಬೇರೆ ಹೆಸರಿನಲ್ಲಿ 22 ಬಾರಿ ಮತದಾನ ಮಾಡಲಾಗಿದೆ ಎಂದಿದ್ದಾರೆ.


ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್, ಮತಗಳ್ಳತನದ ಮೂಲಕ ಹರಿಯಾಣದಲ್ಲಿ ಕಾಂಗ್ರೆಸ್‌ ಗೆಲುವನ್ನು ಬಿಜೆಪಿ ಕಸಿದುಕೊಂಡಿದೆ’ ಎಂದು ಹೇಳಿದ್ದಾರೆ. ಸ್ಕ್ರೀನ್‌ ಮೇಲೆ ಇರುವ ಈ ಮಹಿಳೆ ಯಾರು? ಆಕೆಯ ಹೆಸರೇನು? ಆಕೆ ಎಲ್ಲಿಂದ ಬಂದಿದ್ದಾಳೆ?…. ಆದರೆ, ಆಕೆ ಹರಿಯಾಣದ 10 ಮತಗಟ್ಟೆಗಳಲ್ಲಿ 22 ಬಾರಿ ಮತದಾನ ಮಾಡಿದ್ದಾಳೆ. ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ, ವಿಲ್ಮಾ ಹೀಗೆ ನಾನಾ ಹೆಸರುಗಳನ್ನು ಹೊಂದಿದ್ದಾಳೆ. ಆದರೆ ಆಕೆ ವಾಸ್ತವವಾಗಿ ಬ್ರೆಜಿಲ್ ಮಾಡೆಲ್‌ ಎಂದು ತಿಳಿದುಬಂದಿದೆ’ ಎಂದು ಹೇಳಿದ್ದಾರೆ.


ಈ ಮಾಡೆಲ್‌ ಫೋಟೊ ಹರಿಯಾಣ ಮತದಾರರ ಪಟ್ಟಿಯಲ್ಲಿ ಸೀಮಾ, ಸ್ವೀಟಿ, ಸರಸ್ವತಿ ಮುಂತಾದ ಹೆಸರುಗಳಲ್ಲಿ 22 ಬಾರಿ ನಮೂದಾಗಿದೆ’ ಎಂದು ಇದೇ ವೇಳೆ ವಿವರಿಸಿದ್ದಾರೆ. ಕಾಂಗ್ರೆಸ್ಸಿನ ಅಭೂತಪೂರ್ವ ಗೆಲುವನ್ನು ಸೋಲಾಗಿ ಪರಿವರ್ತಿಸಲು ಒಂದು ಯೋಜನೆಯನ್ನು ರೂಪಿಸಿರುವುದು ನಮಗೆ ಖಚಿತವಾಗಿದೆ. ಭಾರತ ಯುವಜನರು ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ. ಮತಗಳ್ಳತನ ಕೆಲಸದಲ್ಲಿ ಬಿಜೆಪಿಗೆ ಚುನಾವಣಾ ಆಯೋಗ ಸಹಾಯ ಮಾಡುತ್ತಿದೆ ಎಂದೂ ಆರೋಪಿಸಿದ್ದಾರೆ.

Share Information