Connect with us

    LATEST NEWS

    ನಿಜವಾದ ರಾಘವೇಶ್ವರ ಭಾರತೀ ಸ್ವಾಮಿಜಿ ಅವರ ಆಶೀರ್ವಾದ ಬೆಳ್ಳಿಯನ್ನು ಚಿನ್ನವಾಗಿಸಿದ ಪಿ.ವಿ ಸಿಂಧು

    ನಿಜವಾದ ರಾಘವೇಶ್ವರ ಭಾರತೀ ಸ್ವಾಮಿಜಿ ಅವರ ಆಶೀರ್ವಾದ ಬೆಳ್ಳಿಯನ್ನು ಚಿನ್ನವಾಗಿಸಿದ ಪಿ.ವಿ ಸಿಂಧು

    ಮಂಗಳೂರು ಅಗಸ್ಟ್ 26: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಕ್ರೀಡಾಪಟು ಪಿ.ವಿ ಸಿಂಧು ಅವರಿಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಜಿ ಅವರು 2016ರಲ್ಲಿ ಬೆಳ್ಳಿ ಪದಕ ಚಿನ್ನದ ಪದಕವಾಗುತ್ತದೆ ಎಂದು ಆಶೀರ್ವದಿಸಿದ ವಿಡಿಯೋ ಒಂದು ಈಗ ವೈರಲ್ ಆಗಿದೆ.

    2016ರ ರಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಿ. ವಿ ಸಿಂಧು ರಾಘವೇಶ್ವರ ಭಾರತೀ ಸ್ವಾಮಿಜಿ ಅವರನ್ನು ಬೇಟಿಯಾಗಿ ಆಶೀರ್ವಾದ ಪಡೆದಿದ್ದರು. ಆ ಸಂದರ್ಭದಲ್ಲಿ ಪಿ.ವಿ ಸಿಂದು ಅವರು ರಿಯೋ ಒಲಂಪಿಕ್ಸನಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ಸ್ವಾಮಿಜಿಗೆ ತೋರಿಸಿದ್ದರು. ರಾಘವೇಶ್ವರ ಭಾರತೀ ಸ್ವಾಮಿಜಿ ಪಿ.ವಿ ಸಿಂಧು ಅವರು ಗೆದ್ದ ಬೆಳ್ಳಿ ಪದಕ ಮೇಲೆ ಚಿನ್ನದ ನಾಣ್ಯವನ್ನು ಇರಿಸಿ ಈ ಪದಕ ಚಿನ್ನದ ಪದಕವಾಗಲಿ ಎಂದು ಆಶೀರ್ವಾದ ಮಾಡಿದ್ದರು. ಕಾಕತಾಳೀಯ ಎಂಬಂತೆ ಪಿ.ವಿ ಸಿಂಧು ಈ ಬಾರಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

    ಪಿ.ವಿ ಸಿಂಧು ಅವರಿಗೆ ಇದು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಚಿನ್ನದ ಪದಕವಾಗಿದ್ದು, 2013, 2014ರಲ್ಲಿ ಸತತ ಎರಡು ಕಂಚು, 2017 ಮತ್ತು 2018ರಲ್ಲಿ ಸತತ ಎರಡು ಬಾರಿ ಬೆಳ್ಳಿ ಪದಕ ಗೆದ್ದಿದ್ದರು. ಕಳೆದ ವರ್ಷ ಚೀನಾದ ನಾನ್ಜಿಂಗ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಆಡಲು ಹೋಗುವ ಮುನ್ನ ಅವರು, ‘ಹೋದ ಸಲ ಬೆಳ್ಳಿ ಗೆದ್ದಿದ್ದೆ. ಈ ಸಲ ಆ ಪದಕದ ಬಣ್ಣ ಬದಲಿಸುತ್ತೇನೆ’ ಎಂದು ಚಿನ್ನ ಗೆಲ್ಲುವ ವಿಶ್ವಾಸವ್ಯಕ್ತಪಡಿಸಿದ್ದರು. ಆದರೆ ಹೋದ ಸಲವೂ ಅವರು ಬೆಳ್ಳಿ ಪದಕ ಗಳಿಸಿದ್ದರು.

    ಸದ್ಯ ರಾಘವೇಶ್ವರ ಭಾರತೀ ಸ್ವಾಮಿಜಿ ಅವರು ಪಿ ವಿ ಸಿಂಧು ಅವರಿಗೆ ಆಶೀರ್ವಾದ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಘವೇಶ್ವರ ಭಾರತೀ ಸ್ವಾಮಿಜಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ 2016ರಲ್ಲಿ ಸಿಂಧುಗೆ ತಾವು ” ಸಿಂಧು ಬಂದಳು; ಬೆಳ್ಳಿಯ ಪದಕ ತಂದಳು! ಬೆಳ್ಳಿಯ ಮೇಲೆ ಚಿನ್ನವಿಟ್ಟು ಹರಸಿದೆವು’ಬೆಳ್ಳಿ ಚಿನ್ನವಾಗಲೆಂದು!'” ಇಂದು ಸಿಂಧು; ಅಂದಿನ ನಮ್ಮ ಮಾತಿಗೆ ಅರ್ಥವಿತ್ತಳಿಂದು! ಎಂದು ಬರೆದುಕೊಂಡಿದ್ದಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply