ಬೈಕಂಪಾಡಿಯಲ್ಲಿ ಎಸಿಬಿ ದಾಳಿ : 5 ಸಾವಿರ ಲಂಚ ಸ್ವೀಕರಿಸಿದ್ದ ಮೆಸ್ಕಾಂ ಇಂಜಿನೀಯರ್ ಬಂಧನ

ಮಂಗಳೂರು, ಮಾರ್ಚ್ 20 : ಬೈಕಂಪಾಡಿ ಮೆಸ್ಕಾಂ ಕಚೇರಿಗೆ ಮಂಗಳೂರರಿನ ಭ್ರಷ್ಟಚಾರ ನಿಗ್ರಹಣ ದಳ ಎಸಿಬಿ ದಾಳಿ ನಡೆಸಿದೆ. ಈ ಸಂದರ್ಭ ಲಂಚ ತಗೊಳ್ಳುತ್ತಿದ್ದ ಆರೋಪಿ ಮೆಸ್ಕಾಂ ಜೂನಿಯರ್ ಇಂಜಿನೀಯರ್ ಅವರನ್ನು ರೆಡ್‌ ಹ್ಯಾಂಡಾಗಿ ಬಂಧಿಸಿದ್ದಾರೆ.

ಬಂಧಿತ ಭ್ರಷ್ಟ ಅಧಿಕಾರಿಯನ್ನು ಮೆಸ್ಕಾಂ ನ ಜೂನಿಯರ್ ಇಂಜಿನೀಯರ್ ರಾಘವ ಡಿ ಎಂದು ಗುರುತ್ತಿಸಲಾಗಿದ್ದು,ವಿದ್ಯುತ್ ಗುತ್ತಿಗೆದಾರ ಮಂಗಳೂರಿನ ಜಿತೇಶ್ ಎಂಬವರಿಂದ 5 ಸಾವಿರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಖೆಡ್ಡ ತೋಡಿ ಆರೋಪಿ ರಾಘವನನ್ನು ಖೆಡ್ಡಕ್ಕೆ ಬೀಳಿಸಿ ಆ ಬಳಿಕ ಬಂಧಿಸಿದ್ದಾರೆ. ಬೈಕಂಪಾಡಿಯಲ್ಲಿರುವ ಕೈಗಾರಿಕ ಘಟಕ ಒಂದಕ್ಕೆ ಹೆಚ್ಚುವರಿ ವಿದ್ಯುತ್ ಒದಗಿಸುವ ಸಲುವಾಗಿ ಹಣದ ಅಮೀಷ ಮುಂದಿಟ್ಟ ರಾಘವ ಅವರ ವಿರುದ್ದ ಎಸಿಬಿಗೆ ವಿದ್ಯುತ್ ಗುತ್ತಿಗೆದಾರ ಜಿತೇಶ್ ಅವರು ಲಿಖಿತ ರೂರನ್ನು ನೀಡಿದ್ದರು.

Facebook Comments

comments