LATEST NEWS
ಚೊಚ್ಚಲ ಹೆರಿಗೆಯಲ್ಲೇ ನಾಲ್ಕುಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಮಲಪ್ಪುರಂ : ಚೊಚ್ಚಲ ಹೆರಿಗೆಯಲ್ಲೇ ಮಹಿಳೆಯೊಬ್ಬಳು ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಕೇರಳದ ಮಲ್ಲಪ್ಪುರಂನಲ್ಲಿ ನಡೆದಿದೆ. ಪಲಕ್ಕಾಡ್ನ ಛಲಾವರ ಮೂಲದ ದಂಪತಿ ಮುಸ್ತಾಫ ಮತ್ತು ಮುಬೀನಾ ನಾಲ್ಕು ಮಕ್ಕಳನ್ನು ಸಂತಸದಿಂದಲೇ ಬರಮಾಡಿಕೊಂಡಿದ್ದಾರೆ.
ಮುಸ್ತಾಫ ದಂಪತಿ ಕಳೆದ ವರ್ಷ ಮದುವೆಯಾಗಿದ್ದಾರೆ. ಗರ್ಭಾವಸ್ಥೆಯ ಆರಂಭದಲ್ಲೇ ಮಬೀನಾ ನಾಲ್ಕು ಮಕ್ಕಳ ತಾಯಿ ಆಗಲಿದ್ದಾರೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಪೆರಿಂಥಲ್ಮನ್ನದ ಮೌಲಾನಾ ಆಸ್ಪತ್ರೆಯ ಸ್ತ್ರೀರೋಗತಜ್ಞರಾದ ಡಾ. ಅಬ್ದುಲ್ ವಾಹಾಬ್ ಅವರ ಬಳಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು.
ಗರ್ಭಾವತಿಯಾಗಿ 8 ತಿಂಗಳು ಕಳೆದ ಬಳಿಕ ಸಿ-ಸೆಕ್ಷನ್ ಸರ್ಜರಿ ಮೂಲಕ ನಾಲ್ಕು ಮಕ್ಕಳಿಗೆ ಮಬೀನಾ ಜನ್ಮ ನೀಡಿದ್ದಾರೆ. ಪ್ರತಿ ಮಗು 1100 ರಿಂದ 1600 ಗ್ರಾಂ ತೂಗುತ್ತಿದ್ದೆ. ಸದ್ಯ ಮಕ್ಕಳಿಗೆ ನಿಯೋ ಬ್ಲೆಸ್ ವಿಭಾಗದಲ್ಲಿ ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಎಲ್ಲ ಮಕ್ಕಳು ಸಹ ಆರೋಗ್ಯವಾಗಿದ್ದಾರೆಂದು ನಿಯೋ ಬ್ಲೆಸ್ ವಿಭಾಗದ ಉಸ್ತುವಾರಿ ಡಾ. ಜಯಚಂದ್ರ ಅವರು ತಿಳಿಸಿದ್ದಾರೆ.
You must be logged in to post a comment Login