ಉತ್ತರಪ್ರದೇಶ ನವೆಂಬರ್ 01: ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಲು ಸಂಕಷ್ಟಪಡುತ್ತಿದ್ದ ಅಂಗವಿಕಲ ಯುವಕನೊಬ್ಬನ್ನು ಪೊಲೀಸ್ ಸಿಬ್ಬಂದಿಯೊಬ್ಬ ತನ್ನ ಹೆಗಲೆ ಮೇಲೆ ಹೊತ್ತುಕೊಂಡು ಹೋಗಿ ರೈಲು ಹತ್ತಿಸಿದ ಘಟನೆ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ವೀಡಿಯೊದಲ್ಲಿ ಹೇಳಿರುವ ಪ್ರಕಾರ, ಪೊಲೀಸ್ ಅಧಿಕಾರಿ ಅಶ್ವನಿ ಕುಮಾರ್ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದಾಗ, ವಿಶೇಷ ಚೇತನ ವ್ಯಕ್ತಿಯೊಬ್ಬರು ರೈಲ್ವೆ ನಿಲ್ದಾಣದ ಮೆಟ್ಟಿಲು ಇಳಿಯಲು ಕಷ್ಟ ಪಡುತ್ತಿದ್ದ ವೇಳೆ, ಪೊಲೀಸ್​​ ಅಧಿಕಾರಿಯೊಬ್ಬರು ವಿಶೇಷ ಚೇತನ ವ್ಯಕ್ತಿಯನ್ನು ವಿಚಾರಿಸಿ, ಹೆಗಲ ಮೇಲೆ ಹಾಕಿಕೊಂಡು ಅವರನ್ನು ರೈಲಿನ ಬಳಿ ಬಿಟ್ಟು ಬಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

Share Information