ಪುತ್ತೂರು ಸೆಪ್ಟೆಂಬರ್ 24: ಪುತ್ತೂರು ನಗರಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪೋರ್ಜರಿ ಸಹಿ ಕುರಿತು ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ ನಮ್ಮ ಕಚೇರಿಗೆ ಓರ್ವ ಅರ್ಜಿ ಹಾಕಿರುತ್ತಾನೆ. ಅದು ಮೂರು ತಿಂಗಳು ಪೆಂಡಿಂಗ್ ಇರುತ್ತದೆ. ನಾನು ವಾರಕ್ಕೆ ಒಂದು ದಿನ ಮಾತ್ರ ಇಲ್ಲಿಗೆ ಬರುತ್ತಿದ್ದೆ.

ಒಂದು ದಿನ ಕಚೇರಿಗೆ ಬಂದು ನನ್ನನ್ನು ಉಲ್ಲೇಖಿಸಿ ಸಿಬ್ಬಂದಿಗಳ ಜೊತೆ ಸರ್ ಪೈಲ್ ತರಲು ಹೇಳಿದ್ದಾರೆಂದು ಹೇಳಿ ನಮ್ಮ ಟೈಪಿಸ್ಟ್ ಜೊತೆಯಲ್ಲಿ ಟೈಪ್ ಮಾಡಿಸಿಕೊಂಡು ನನ್ನ ಸಹಿಯನ್ನು ದುರುಪಯೋಗ ಪಡಿಸಿಕೊಂಡಿದ್ದರು. ಕಟ್ಟಡ ಅನುಮೋದನೆಗೆ ಬಂದಾಗ ನಾನು ಪೋರ್ಜರಿ ಸಹಿ ತಿಳಿದು ತಕ್ಷಣ ಅದನ್ನು ಕ್ಯಾನ್ಸಲ್ ಮಾಡಿದ್ದೇನೆ.
ಈ ಕುರಿತು ಪೊಲೀಸರಿಗೆ ದೂರು ನೀಡಲು ಹೋಗಿದ್ದ ಸಂದರ್ಭ ಕಚೇರಿಯ ಅಮಾಯಕ ಸಿಬ್ಬಂದಿಗಳ ಮೇಲೂ ಪ್ರಕರಣ ದಾಖಲಾಗುವ ಸಾಧ್ಯತೆ ಇರುವುದರಿಂದ ಅದನ್ನು ಮುಂದುವರಿಸಿಲ್ಲ. ಆದರೆ ಯಾರು ಪೋರ್ಜರಿ ಸಹಿ ಮಾಡಿದ್ದಾರೋ ಅವರ ಕಟ್ಟಡ ಅನುಮೋದನೆ ಕಡತವನ್ನು ಕ್ಯಾನ್ಸಲ್ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.



