ಪುತ್ತೂರು ಜನವರಿ 13: ಆರ್.ಎಸ್.ಎಸ್ ಗೆ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿ ಬರುವ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಶತ ಜಯಘೋಷ ಮೆರವಣಿಗೆ ನಡೆಯಿತು.

1500 ವಿದ್ಯಾರ್ಥಿಗಳು ಸ್ವಯಂಸೇವಕ ಸಂಘದ ಘೋಷ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪುತ್ತೂರಿನ ಬೊಳುವಾರಿನಿಂದ ಒಂದು ತಂಡ ಮತ್ತು ಕಲ್ಲಾರೆಯಿಂದ ಒಂದು ತಂಡ ಮೆರವಣಿಗೆ ಹೊರಟು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಸಮಾಗಮಗೊಂಡಿತು. ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಲವು ಆರ್.ಎಸ್.ಎಸ್ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು