DAKSHINA KANNADA
ಪುತ್ತೂರು : ಹವ್ಯಾಸಿ ಗಾಯಕ ಬಾಬು ಸಂಪಡ್ಕ ಹೃದಯಾಘಾತಕ್ಕೆ ಬಲಿ..!
ಪುತ್ತೂರು : ಹವ್ಯಾಸಿ ಗಾಯಕ ಬಾಬು ಸಂಪಡ್ಕ ಅವರು ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ. ಆಟೋ ಚಾಲಕರಾಗಿ ದುಡಿಯುತ್ತಿದ್ದ ಬಾಬು ಅವರು ಕಡಬದ ಬಿಎಸ್ ಎನ್ ಎಲ್ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಹಲವು ಸಮಯದಿಂದ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು.
ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಬಾಬು ಸಂಪಡ್ಕ ಅವರು ಹಲವಾರು ಕಡೆಗಳಲ್ಲಿ ಗಾಯನ,ಭಜನೆ,ನೃತ್ಯ, ತಬಲಾವಾದಕನದ ಮೂಲಕ ಜನರ ಪ್ರೀತಿ ಗಳಿಸಿದ್ದರು. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು.ಇದೀಗ ಹೃದಯಾಘಾತದಿಂದ ನಿಧನರಾಗಿದ್ದಾರೆ ಬಾಬು ಸಂಪಡ್ಕ ಅವರ ಅಕಾಲಿಕ ನಿಧನಕ್ಕೆ ರಾಜಕೀಯ ಮುಖಂಡರು, ದಲಿತಪರ ಸಂಘಟನೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.
You must be logged in to post a comment Login