DAKSHINA KANNADA
ಪುತ್ತೂರು – ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ
ಪುತ್ತೂರು ಅಗಸ್ಟ್ 06: ಪುತ್ತೂರಿನ ಸಂಪ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ರಿಕ್ಷಾ ಚಾಲಕರೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪ್ಯ ಕೊಲ್ಯ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಪುರುಷರಕಟ್ಟೆಯ ಪಾಪೆತ್ತಡ್ಕ ನಿವಾಸಿ ಮಹಮ್ಮದ್ ಎಂದು ಗುರುತಿಸಲಾಗಿದೆ.
ಸಂಪ್ಯದ ಕೊಲ್ಯ ಎಂಬಲ್ಲಿರುವ ಗಣಪತಿ ವಿಗ್ರಹ ವಿಸರ್ಜನೆಯ ಕೆರೆಗೆ ಮಹಮ್ಮದ್ ರವರು ಹಾರಲು ಯತ್ನಿಸಿದ ವೇಳೆ ಸುತ್ತಮುತ್ತಲಿನವರು ಬೊಬ್ಬೆ ಹಾಕಿ ಹಾರದಂತೆ ಹೇಳಿದ್ದಾರೆ. ಆದರೂ ‘ಸಾಯುತ್ತೇನೆ’ ಎಂದು ಹೇಳಿ ಮಹಮ್ಮದ್ ರವರು ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ. ಪುತ್ತೂರಿನ ಸಂಪ್ಯ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ
You must be logged in to post a comment Login