DAKSHINA KANNADA
ಪುತ್ತೂರು: ಯುವಕನಿಂದ ಲವ್ ಜಿಹಾದ್ ಆರೋಪ, ಠಾಣೆ ಮುಂದೆ ಜಮಾಯಿಸಿದ ಹಿಂದೂಪರ ಸಂಘಟನೆಗಳು
ಪುತ್ತೂರು, ಸೆಪ್ಟೆಂಬರ್ 16: ಹಿಂದೂ ಹೆಸರಿನಲ್ಲಿ ಯುವತಿಯನ್ನು ನಂಬಿಸಿರುವ ಆರೋಪದಲ್ಲಿ ಅನ್ಯಕೋಮಿನ ಯುವಕನ್ನು ಪೋಲಿಸರು ವಶಕ್ಕೆ ಪಡೆದ ಘಟನೆ ಇಂದು ನಡೆದಿದೆ.
ಕುಂದಾಪುರ ಮೂಲದ ಹಿಂದೂ ಯುವತಿ ಹಾಗೂ ಕೋಟೇಶ್ವರದ ಅನ್ಯಕೋಮಿನ ಹುಡುಗ ಜೊತೆಯಾಗಿ ಪುತ್ತೂರಿನಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅನ್ಯಕೋಮಿನ ಯುವಕನನ್ನು ತಡೆದು ವಿಚಾರಿಸಿದ್ದು, ಹಿಂದೂ ಯುವತಿಗೆ ಪುತ್ತೂರಿನಲ್ಲಿ ಮಾರ್ಕೆಟಿಂಗ್ ಕೆಲಸ ಕೊಡಿಸುವ ಆಮಿಷ ತೋರಿಸಿ ಈತ ಲವ್ ಜಿಹಾದ್‌ಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಇವರಿಬ್ಬರ ಬಗ್ಗೆ ತಿಳಿದಿದ್ದ ಕುಂದಾಪುರದ ಹಿಂದೂ ಸಂಘಟನೆಗಳು ಪುತ್ತೂರಿನ ಹಿಂದೂ ಸಂಘಟನೆಯವರಿಗೆ ಮಾಹಿತಿಯನ್ನು ನೀಡಿದ್ದು, ಇದೀಗ ಇವರಿಬ್ಬರನ್ನು ಹಿಂದೂ ಕಾರ್ಯಕರ್ತರು ಪುತ್ತೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು ಠಾಣೆಯ ಮುಂದೆ ಜಮಾಯಿಸಿದ್ದಾರೆ.
ಯುವಕನ ಮೇಲೆ ಕಠಿಣ ಕ್ರಮಕ್ಕೆ ಸಂಘಟನೆಗಳ ಆಗ್ರಹ ಪಡಿಸಿದ್ದು, ಮತೀಯ ಸಂಘಟನೆಗಳು ಯುವಕನಿಗೆ ಸಾಥ್ ನೀಡಿರುವ ಬಗ್ಗೆ ಹಿಂದೂ ಸಂಘಟನೆಗಳು ಆರೋಪ ಮಾಡಿದೆ.
You must be logged in to post a comment Login