ಪುತ್ತೂರು ಜನವರಿ 04: ಮನೆ ಕಳೆದುಕೊಂಡು ನಿರ್ವಸಿತರಾಗಿರುವ ಕೌಕ್ರಾಡಿಯ ಕಾಪಿನಬಾಗಿಲು ನಿವಾಸಿ ರಾಧಮ್ಮ ಮತ್ತು ಮುತ್ತು ಸ್ವಾಮಿ ಹಾಗು ಮಕ್ಕಳು ಪುತ್ತೂರು ಮಿನಿ ವಿಧಾನಸೌಧದ ಎದುರು ನಡೆಸುತ್ತಿರುವ ಧರಣಿ 7 ದಿನಕ್ಕೆ ಕಾಲಿಟ್ಟಿದೆ. ನ್ಯಾಯ ಸಿಗುವ ತನಕ ಇಲ್ಲಿಂದ ಕದಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಚಳಿಯಲ್ಲೂ ರಾತ್ರಿಯೂ ಮರದ ಅಡಿಯಲ್ಲೇ ವೃದ್ದ ದಂಪತಿ ಮಲಗಿ ಪ್ರತಿಭಟನೆ ಮುಂದುವರೆಸಿದ್ದಾರೆ.


ಇಂದು ಪುತ್ತೂರು ಶಾಸಕ ಅಶೋಕ್ ರೈ ದಂಪತಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ವೃದ್ದ ದಂಪತಿಗಳ ಮನವಿಯನ್ನು ಆಲಿಸಿದ್ದಾರೆ, ಬಳಿಕ ಮಾತನಾಡಿದ ಅವರು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ರಾದಮ್ಮ ದಂಪತಿಗಳು ಸುಮಾರು ದಿನದಿಂದ ಪುತ್ತೂರು ಮಿನಿ ವಿಧಾನಸೌಧದ ಎದುರು ಧರಣಿಯನ್ನು ಕೂತಿದ್ದಾರೆ. ಅದು ನನ್ನ ವಿಧಾನಸಭಾ ಕ್ಷೇತ್ರದಿಂದ ಹೊರಗೆ ಬರುವಂತ ವಿಧಾನಸಭಾ ಕ್ಷೇತ್ರ, ಈ ಕುರಿತಂತೆ ಮೊನ್ನೆ ವಿಚಾರಣೆ ಮಾಡುವಾಗ ಅಧಿಕಾರಿಗಳು ಇದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಇವತ್ತು ಕೂಡ ನಾನು ಬರುವಾಗ ಈ ಮರದ ಕೆಳಗೆ ಕೂತಿದ್ದಾರೆ ನಾಳೆಯಿಂದ ನಾವು ಉಪವಾಸ ಮಾಡುವ ಮುಖಾಂತರ ನಮ್ಮ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾನು ಇವತ್ತು ಅವರು ಬಂದು ಭೇಟಿ ಮಾಡಿದ್ದೇನೆ ಅವರ ಬೇಡಿಕೆ ಕೇಳಿದ್ದೇನೆ. ಅವರ ವಾಸವಿರುವಂತ ಸ್ಥಳವನ್ನು ಸರಕಾರಿ ಅಧಿಕಾರಿಗಳು ಕೋರ್ಟ್ ಆದೇಶ ಇದೆ ಎಂದು ನೆಲಸಮ ಮಾಡಿದ್ದಾರೆ. ಆದರೆ ಇವರು ಹೇಳುವ ಪ್ರಕಾರ ಕೋರ್ಟ್ ಆದೇಶ ಇರುವಂತದ್ದು ಇನ್ನೊಬ್ಬರ ಮನೆ ಅಂತ ಹೇಳುತ್ತಿದ್ದಾರೆ.


ವೃದ್ದ ದಂಪತಿ ಸುಮಾರು 20 ವರ್ಷದಿಂದ ಆ ಜಾಗದಲ್ಲಿ ನಾನು ವಾಸ ಮಾಡ್ತಾ ಇದ್ದೇನೆ 94ಸಿ ಅರ್ಜಿ ಕೊಟ್ಟಿದ್ದೇನೆ ಅದನ್ನು ತಿರಸ್ಕೃತ ಅಂತ ಹೇಳಿದ್ದಾರೆ. ಮನೆಯ ಹತ್ತಿರ ಇರುವ ಹಲವರಿಗೆ 94ಸಿ ಮಾಡಿಕೊಟ್ಟಿದ್ದಾರೆ ನನಗೆ ಮಾಡಿಕೊಡಲಿಲ್ಲ. 20 ವರ್ಷದಿಂದ ಬೇರೆ ಬೇರೆ ಕಚೇರಿಗಳಿಗೆ ನಾನು ಅಳೆದಾಡಿದ್ದೀನಿ 94ಸಿ ಗಾಗಿ ಮಾಡಿಕೊಡಲಿಲ್ಲ ಬೇರೆ ಬೇರೆ ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಹೋಗಿದ್ದೀನಿ ನನಗೆ ಆಗಲಿಲ್ಲ ಎಂದಿದ್ದಾರೆ ಎಂದರು.

ಇದನ್ನೂ ಓದಿ-ತ್ರಿಶೂರ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ನಲ್ಲಿ ಬೆಂಕಿ ಅವಘಡ – 500ಕ್ಕೂ ಅಧಿಕ ಸ್ಕೂಟರ್ ಮತ್ತು ಬೈಕ್ ಗಳು ಸುಟ್ಟು ಭಸ್ಮ

ಈ ವೃದ್ದ ದಂಪತಿಗಳ ನೋವಿಗೆ ಸ್ಪಂದನೆ ಮಾಡುವಂತದ್ದು ನಮ್ಮ ಧರ್ಮ. ಅಧಿಕಾರಿಗಳಿಗೆ ಕರೆ ಮಾಡಿದ್ದೇ ಯಾರು ಕೂಡ ಕರೆಯನ್ನು ಸ್ವೀಕಾರ ಮಾಡ್ತಾ ಇಲ್ಲ ನಾಳೆ ಸೋಮವಾರ ಇದೆ ಅದಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳನ್ನು ಕಡೆದು ಅವರಿಗೆ ಹೇಗೆ 94ಸಿ ಯಲ್ಲಿ ಅವರ ಜಾಗವನ್ನು ಅವರು ವಾಸಿಸುವಂತ ಅಡಿ ಜಾಗವನ್ನು ಅವರಿಗೆ ಮಾಡಿಕೊಡುವಂತ ಪ್ರಯತ್ನವನ್ನು ಮಾಡ್ತೇವೆ ಮತ್ತೆ ಅವರಿಗೆ ಸರಕಾರದಿಂದ ಒಂದು ಯೋಜನೆಯಲ್ಲಿ ಮನೆ ಕಟ್ಟಲಿ ಕೂಡ ಒಂದು ವ್ಯವಸ್ಥೆಯನ್ನು ಮಾಡಬೇಕು ಅನ್ನುವ ಒಂದು ವಿಚಾರಕ್ಕೆ ನಾವು ಬಂದಿದ್ದೇವೆ ನಾಳೆ ಅಧಿಕಾರಿಗಳನ್ನು ಕರೆದು ವ್ಯವಸ್ಥೆ ಮಾಡಲಾಗುವುದು ಎಂದರು.

Share Information