ಪುತ್ತೂರು ಮಾರ್ಚ್ 09: ಇತಿಹಾಸ ಪ್ರಸಿದ್ಧ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.

ವಾರ್ಷಿಕ ಜಾತ್ರೆಯು ಎಪ್ರಿಲ್ 10 ರಿಂದ ಆರಂಭಗೊಂಡು ಎಪ್ರಿಲ್ 17 ರಂದು ಮಹಾರಥೋತ್ಸವ ನಡೆಯಲಿದೆ. ಶ್ರೀ ದೇವರ ನಡೆಯಲ್ಲಿ ಜಾತ್ರೆಯ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಈ ರೀತಿ ಇದೆ.
01.04.2026 ಬುಧವಾರ
ಬೆಳಿಗ್ಗೆ ಪ್ರಾರ್ಥನೆ, ಗಂಟೆ 9-15 ನಂತರ ವೃಷಭ ಲಗ್ನದಲ್ಲಿ ಗೊನೆ ಮುಹೂರ್ತ, ಕೊಟ್ಟಿಬೆಟ್ಟು ಏಳ್ನಾಡುಗುತ್ತು ಇವರಿಂದ ಅನ್ನಸಂತರ್ಪಣೆ.
10.04.2026 ಶುಕ್ರವಾರ
ಬೆಳಿಗ್ಗೆ ಗಂಟೆ 9-30ರ ನಂತರ ವೃಷಭ ಲಗ್ನದಲ್ಲಿ ಧ್ವಜಾರೋಹಣ, ಕುರಿಯ ಏಳ್ನಾಡುಗುತ್ತು ಇವರಿಂದ ಅನ್ನಸಂತರ್ಪಣೆ
ಸಂಜೆ ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು ,
ಶ್ರೀರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ , ಕಲ್ಲೇಗ , ಕರ್ಮಲ ಸವಾರಿ
11.04.2026 ಶನಿವಾರ
ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕ.ರಾ.ರ.ಸಾ.ನಿ ಪುತ್ತೂರು ವಿಭಾಗದವರಿಂದ ಮಧ್ಯಾಹ್ನ ಅನ್ನಸಂತರ್ಪಣೆ
ಸಂಜೆ ಉತ್ಸವ, ಕಟ್ಟೆ ಪೂಜೆ, ಪೇಟೆ ಸವಾರಿ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರ ಬೆಟ್ಟು ಸವಾರಿ
12.04.2026 ಆದಿತ್ಯವಾರ
ಸಂಜೆ ಉತ್ಸವ, ಕಟ್ಟೆಪೂಜೆ ಶಿವಪೇಟೆ,ತೆಂಕಿಲ, ಕೊಟ್ಟಿಬೆಟ್ಟು ಏಳ್ನಾಡ್ ಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ ಸವಾರಿ.
13.04.2026 ಸೋಮವಾರ
ಸಂಜೆ ಉತ್ಸವ, ಕಟ್ಟೆಪೂಜೆ, ಪೇಟೆ ಸವಾರಿ ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರು ಬೈಲ್ ಸವಾರಿ.
14 -04-2026 ಮಂಗಳವಾರ ಮೇಷ ಸಂಕ್ರಮಣ, ಸಂಜೆ ಉತ್ಸವ, ಕಟ್ಟೆಪೂಜೆ ಪೇಟೆ ಸವಾರಿ ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆ ಸವಾರಿ.
15.04.2026 ಬುಧವಾರ ಸೌರಮಾನ ಯುಗಾದಿ (ವಿಷು) ಬೆಳಿಗ್ಗೆ ಉತ್ಸವ, ವಸಂತ ಕಟ್ಟೆ ಪೂಜೆ,
ಸಂಜೆ ಉತ್ಸವ, ಕಟ್ಟೆ ಪೂಜೆ, ಬಂಡಿ ಉತ್ಸವ ( ಚಂದ್ರಮಂಡಲ ರಥ)
ಬನ್ನೂರು, ಅಶೋಕನಗರ, ರೈಲ್ವೆ ಮಾರ್ಗ ಸವಾರಿ.
16.04.2026 ಗುರುವಾರ
ಬೆಳಿಗ್ಗೆ 8.30 ರಿಂದ ತುಲಾಭಾರ
ಸಂಜೆ ಉತ್ಸವ, ಶ್ರೀ ಮಹಾಲಿಂಗೇಶ್ವರ ಹಾಗು ಶ್ರಿ ದಂಡನಾಯಕ ಉಳ್ಳಾಳ್ತಿ ಭೇಟಿ, ಪಾಲಕಿ ಉತ್ಸವ, ಸಣ್ಣ ರಥೋತ್ಸವ,
ಕೆರೆ ಆಯನ ತೆಪ್ಪೋತ್ಸವ ನಡೆಯಲಿದೆ.
17.04.2026 ಶುಕ್ರವಾರ
ಬೆಳಗ್ಗೆ ಉತ್ಸವ, ವಸಂತಕಟ್ಟೆ ಪೂಜೆ ,ದರ್ಶನ ಬಲಿ ಬಟ್ಟಲು ಕಾಣಿಕೆ, ದಿ| ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣಾರ್ಥ ಸಹೋದರಿ, ಸಹೋದರರು ಹಾಗೂ ಮಕ್ಕಳಿಂದ ಮಧ್ಯಾಹ್ನ ಅನ್ನಸಂತರ್ಪಣೆ , ರಾತ್ರಿ 7.30ರಿಂದ ಉತ್ಸವ ವೈಭವದ ಪುತ್ತೂರು ಬೆಡಿ, ವೈಭವದ ಬ್ರಹ್ಮರಥೋತ್ಸವ
ಬಂಗಾರ್ ಕಾಯರ್ ಕಟ್ಟೆ ಸವಾರಿ, ಶ್ರೀ ದಂಡನಾಯಕ – ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ
ಶ್ರೀ ಭೂತಬಲಿ,ಶಯನ ನಡೆಯಲಿದೆ.
18.04.2026 ಶನಿವಾರ
ಬೆಳಿಗ್ಗೆ ಬಾಗಿಲು ತೆಗೆಯುವ ಮುಹೂರ್ತ, 8.30 ತುಲಾಭಾರ ಸೇವೆ, ಸಂಜೆ 3.30ರಿಂದ ವೀರಮಂಗಲ ಅವಭೃತ ಸ್ನಾನಕ್ಕೆ ಸವಾರಿ.
19.04.2026 ಆದಿತ್ಯವಾರ
ಧ್ವಜಾವರೋಹಣ ನಡೆಯಲಿದ್ದು,
ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ಪ್ರಾರಂಭ, ಏಳ್ನಾಡ್ ದೈವ ಪಿಲಿಭೂತ , ರಕ್ತೇಶ್ವರಿ ನೇಮ ನಡೆಯಲಿದೆ.
20.04.2026 ಸೋಮವಾರ
ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ ನಡೆಯಲಿದೆ.