ಪುತ್ತೂರು ಡಿಸೆಂಬರ್ 23: ಕೋಳಿ ಅಂಕದ ವಿಚಾರದಲ್ಲಿ ಕೋಳಿ ಅಂಕದ ವಿಚಾರದಲ್ಲಿ ಪುತ್ತೂರು ಶಾಸಕರು ನಗೆಪಾಟಲಿಗೀಡಾಗಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣತಪ್ರಸಾದ್ ಆಳ್ವ ತಿರುಗೇಟು ನೀಡಿದ್ದು, ಶಾಸಕರನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಬಿಜೆಪಿಗೆ ಇಲ್ಲ ಎಂದಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೋಲೀಸರು ಅಡ್ಡಿಪಡಿಸಿದಾಗ ಪುತ್ತೂರು ಶಾಸಕರು ಅಲ್ಲಿಗೆ ಹೋಗಿದ್ದಾರೆ. ಕೋಳಿ ಅಂಕ ನಡೆಸಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದಾರೆ. ಆ ಬಳಿಕ ಶಾಸಕರ ಮೇಲೆ ಪೋಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಧಾರ್ಮಿಕ ಆಚರಣೆಗೆ ಯಾವುದೇ ಚ್ಯುತಿ ಬರಬಾರದು ಎನ್ನುವ ಕಾರಣಕ್ಕೆ ಶಾಸಕರು ಧ್ವನಿ ಎತ್ತಿದ್ದರು, ಆದರೆ ಬಿಜೆಪಿ ಇದನ್ನು ಯಾವ ಆಧಾರದಲ್ಲಿ ನಗೆಪಾಟಲಿ ಎನ್ನುತ್ತಿದೆ ಎಂದು ಪ್ರಶ್ನಿಸಿದರು.
ಧರ್ಮದ ವಿಚಾರ ಬಂದಾಗ ಶಾಸಕರು ಎಲ್ಲಾ ಕಡೆಯಲ್ಲೂ ಧ್ವನಿ ಎತ್ತಿದ್ದಾರೆ, ಶಾಸಕರ ಜನಪ್ರಿಯತೆಯನ್ನು ಸಹಿಸದ ಬಿಜೆಪಿ ಮಹಾಭಾರತದ ಗಾಂಧಾರಿಯ ನಂಜನ್ನು ಪ್ರದರ್ಶಿಸುತ್ತಿದೆ ಎಂದು ಕೃಷ್ಣಪ್ರಸಾದ್ ಆಳ್ವ ಹೇಳಿದ್ದಾರೆ.



