ಪುತ್ತೂರು ಮಾರ್ಚ್ 17: ಪುತ್ತೂರು ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಅಳವಡಿಸಲಾಗಿದ್ದ ಬೃಹತ್ ರಾಷ್ಟ್ರಧ್ವಜವು ಹರಿದು ಬಿದ್ದಿದೆ.

ರಾಜ್ಯದ ಮೂರನೇ ಅತೀ ಎತ್ತರದ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಸ್ಥಳದಲ್ಲಿ ನಡೆದ ಅವಘಡವು ಸಾರ್ವಜನಿಕರಲ್ಲಿ ನೋವುಂಟು ಮಾಡಿದೆ. ದೇಶಭಕ್ತಿಯ ಸಂಕೇತವಾಗಿ ಈ ಬೃಹತ್ ಧ್ವಜವನ್ನು ಕೆಲವೇ ದಿನಗಳ ಹಿಂದಷ್ಟೇ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಅತ್ಯಂತ ಎತ್ತರದ ಸ್ತಂಭಕ್ಕೆ ಅಳವಡಿಸಲಾಗಿತ್ತು. ರಾತ್ರಿ ವೇಳೆ ಬೀಸಿದ ತೀವ್ರ ಗಾಳಿಯ ವೇಗಕ್ಕೆ ಧ್ವಜವು ಹರಿದು ಕೆಳಕ್ಕೆ ಬಿದ್ದಿದೆ.