LATEST NEWS
ಪುತ್ತೂರಿನಲ್ಲಿ ಭೀಕರ ಅಪಘಾತ – ಒಂಬತ್ತು ವರ್ಷದ ಮಗು ಮೃತ್ಯು
ಪುತ್ತೂರು ನವೆಂಬರ್ 2: ಕೇರಳ ನೋಂದಾವಣೆ ಹೊಂದಿದ ಕಾರೊಂದು ಪುತ್ತೂರಿನ ಧರ್ಭೆ ಬೈಪಾಸ್ ಬಳಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ವರ್ಷದ ಮಗು ಮೃತಪಟ್ಟ ಧಾರುಣ ಘಟನೆ ನಡೆದಿದೆ . ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳು ಹಾಗೂ ಮಹಿಳೆಗೆ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದೆ. ಅಪಘಾತ ನಡೆದ ಕೂಡಲೇ ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಒಂಬತ್ತು ವರ್ಷದ ಒಂದು ಮಗು ಮೃತ ಪಟ್ಟಿದೆ. ಇನ್ನೊಂದು ಮಗು ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದು ಹೋಗಲಾಗಿದೆ. ಮಹಿಳೆಗೆ ಪುತ್ತೂರಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರಿನಿಂದ ಸುಳ್ಯದತ್ತ ಚಲಿಸುತ್ತಿದ್ದ ಸ್ವಿಫ್ಟ್ ಕಾರು ದರ್ಬೆ ಬೈಪಾಸಿನ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಈ ಇಬ್ಬರು ಮಕ್ಕಳಿಗೆ ಹಾಗೂ ಮಹಿಳೆಗೆ ಡಿಕ್ಕಿ ಹೊಡೆದು , ಬಳಿಕ ಎದುರಿನಲ್ಲಿದ್ದ ಎಕ್ಸ್ ಕ್ರಾಸ್ (ಕೆಎ3ಎನ್ ಎಕ್ಸ್ 5100) ಕಾರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಕ್ಸ್ ಕ್ರಾಸ್ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
Facebook Comments
You may like
-
ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕೊಳೆತ ಭ್ರೂಣದ ಅವಶೇಷ ಪತ್ತೆ..!!
-
ಪುತ್ತೂರು ಅಕ್ರಮ ಗಾಂಜಾ ಸಾಗಾಟಕ್ಕೆ ಯತ್ನ – 40 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು
-
ಬಿಯರ್ ತುಂಬಿದ್ದ ಲಾರಿ ಪಲ್ಟಿ…ಬಿಯರ್ ಬಾಟಲ್ ಗಳಿಗೆ ಮುಗಿಬಿದ್ದ ಮದ್ಯಪ್ರಿಯರು
-
ಗೂಗಲ್ ಮ್ಯಾಪ್ ನಂಬಿ ಗಲ್ಲಿಗೆ ನುಗ್ಗಿದ ಬಸ್ – 11 ಕೆವಿ ವಿದ್ಯುತ್ ತಂತಿ ತಗುಲಿ 11 ಮಂದಿ ಸಜೀವ ದಹನ
-
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯ ಆರಂಭ
-
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: ಆತ್ಮಹತ್ಯೆ ಶಂಕೆ
You must be logged in to post a comment Login