ಪುತ್ತೂರು ನವೆಂಬರ್ 24: ಪುತ್ತಿಲ ಪರಿವಾರ ಮತ್ತು ಬಿಜೆಪಿ ಮಧ್ಯೆ ಮತ್ತೆ ಅಸಮಧಾನ ಸ್ಪೋಟಗೊಂಡಿದ್ದು, ಇದೀಗ ಸ್ವತಃ ಅರುಣ್ ಕುಮಾರ್ ಪುತ್ತಿಲ ಒಪ್ಪಿಕೊಂಡಿದ್ದು, ಜವಬ್ದಾರಿ ಕೊಡಬೇಕೆಂದು ಸೂಚಿಸಲಾಗಿದ್ದರೂ, ಜಬಾಬ್ದಾರಿ‌ ಮತ್ತು ಯಾಕೆ ಕೊಟ್ಟಿಲ್ಲ ಅನ್ನೋದನ್ನ ಬಿಜೆಪಿ ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಪುತ್ತಿಲ ಪರಿವಾರ ಮತ್ತು ಬಿಜೆಪಿ ಮಧ್ಯೆ ಮತ್ತೆ ಅಸಮಾಧಾನ ನಿಜ ಎಂದ ಅವರು, ನನಗೆ ಪಕ್ಷದ ಜವಬ್ದಾರಿ ಕೊಡಬೇಕೆಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸೂಚಿಸಲಾಗಿತ್ತು. ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರಿಗೆ ಪಕ್ಷದ ಹಿರಿಯರು ಸೂಚಿಸಿದ್ದರು, ಯಾವ ಜಬಾಬ್ದಾರಿ‌ ಮತ್ತು ಯಾಕೆ ಕೊಟ್ಟಿಲ್ಲ ಅನ್ನೋದನ್ನ ಬಿಜೆಪಿ ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದರು.


ಈ‌ ಹಿಂದೆ ಪುತ್ತೂರು ನಗರ ಸಭೆಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲರ ಜೊತೆಗೆ ಬಿಜೆಪಿ ಮುಖಂಡರು ನಡೆಸಿದ ಸಭೆಯಲ್ಲಿ ಪುತ್ತಿಲ ಅರ್ಧದಲ್ಲೇ ಹೊರನಡೆದಿದ್ದರು ಎನ್ನುವ ವಿಚಾರಕ್ಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇಂತಹ ಯಾವುದೇ ಸಭೆ ನಡೆದಿಲ್ಲ ಎಂದರು.
ಈಗಲೂ ಎರಡೂ ಮಂಡಲಗಳನ್ನು ಜೋಡಿಸಿ ಕೊಟ್ಟಲ್ಲಿ ನಾವು ನಾಳೆಯೇ ಜವಾಬ್ದಾರಿ ತೆಗೆದುಕೊಳ್ಳುವೆ ಎಂದರು.

ReadThis – ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ..ಬಾಲಿವುಡ್ ದಂತಕತೆ ಇನ್ನು ನೆನಪು ಮಾತ್ರ..!

ಅಲ್ಲದೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಅಮಿತ್ ಶಾ ಕರೆ ಮಾಡಿದ್ದರು ಎಂದು ಹೇಳಲಾಗುತ್ತಿದೆ, ಆದರೆ ನನಗೆ ಅಮಿತ್ ಶಾ ಕರೆ ಮಾಡಿಲ್ಲ. ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದವರಿಗೆ ಪಕ್ಷ ಜವಾಬ್ದಾರಿ ನೀಡಿದೆ. ಆ ಸಂದರ್ಭದಲ್ಲಿ ನನಗೆ ಜವಾಬ್ಸಾರಿ ಬೇಡ ಕಾರ್ಯಕರ್ತರಿಗೆ ನೀಡಿ ಎಂದಿದ್ದೆ. ಆದರೆ ಕಾರ್ಯಕರ್ತರಿಗೆ ನನಗೆ ಜವಾಬ್ದಾರಿ ನೀಡದಿರುವುದು ಬೇಸರ ತಂದಿದೆ. ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲ ಒಟ್ಟು ಮಾಡಿ ಜವಾಬ್ದಾರಿ ನೀಡಿದರೆ ಸಂಘಟನೆ ಮಾಡಲು ಬದ್ಧ, ಜವಬ್ದಾರಿ ನೀಡಿದರೆ ಪುತ್ತೂರಿನಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತೇವೆ, ಚುನಾವಣೆಗೆ ಯಾರು ನಿಂತರೂ ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ. ಕಾರ್ಯಕರ್ತರ ಒಲವು ಯಾರ ಮೇಲಿದೆಯೋ ಅಂತಹ ಅಭ್ಯರ್ಥಿ ಪುತ್ತೂರಿಗೆ ಬೇಕು ಎಂದರು. ಕಾರ್ಯಕರ್ತರ ನಿಲುವಿಗೆ ನಾನು ಎಂದಿಗೂ ಬದ್ದ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ಇದರೊಂದಿಗೆ ಬಿಜೆಪಿ ಪಕ್ಷದ ಜವಾಬ್ದಾರಿಗೆ ಅರುಣ್ ಕುಮಾರ್ ಪುತ್ತಿಲ ಪಟ್ಟು ಹಿಡಿದಿದ್ದಾರೆ.

Share Information