ಅಮೆರಿಕ, ಮಾರ್ಚ್ 29: ಇರಾನ್ ವಿರುದ್ದ ಯುದ್ದಕ್ಕಿಳಿದ ಟ್ರಂಪ್ ವಿರುದ್ದ ಇದೀಗ ಅಮೇರಿಕದಲ್ಲಿ ಅಮೆರಿಕದಾದ್ಯಂತ ಅಭೂತಪೂರ್ವ ಪ್ರತಿಭಟನೆಗಳು ನಡೆದಿವೆ. ‘ನೋ ಕಿಂಗ್ಸ್’ (No Kings) ಎಂಬ ಹೆಸರಿನಡಿ ಸಂಘಟಿತವಾಗಿದ್ದ ಈ ಬೃಹತ್ ಚಳವಳಿಯಲ್ಲಿ, ದೇಶದ 50 ರಾಜ್ಯಗಳ ಸುಮಾರು 3,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲನೆಯದಾಗಿ, ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿ ‘ಯುದ್ಧ ಬೇಡ, ಶಾಂತಿ ಬೇಕು’ ಎಂಬ ಘೋಷಣೆಗಳು ಮೊಳಗಿವೆ. ಪ್ರತಿಭಟನೆಯ ಪ್ರಮುಖ ಕೇಂದ್ರವಾಗಿ ಮಿನೆಸೋಟದ ಸೇಂಟ್ ಪಾಲ್ ಹೊರಹೊಮ್ಮಿದೆ. ಇಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಖ್ಯಾತ ರಾಕ್ ಗಾಯಕ ಬ್ರೂಸ್ ಸ್ಪ್ರಿಂಗ್ಸ್ಟೀನ್ ಭಾಗವಹಿಸಿ, ತಮ್ಮ ಪ್ರದರ್ಶನದ ಮೂಲಕ ಹೋರಾಟಗಾರರಿಗೆ ನೈತಿಕ ಬೆಂಬಲ ನೀಡಿದರು. ನ್ಯೂಯಾರ್ಕ್, ವಾಷಿಂಗ್ಟನ್ ಡಿ.ಸಿ., ಚಿಕಾಗೋ ಮತ್ತು ಲಾಸ್ ಏಂಜಲೀಸ್ನಂತಹ ಪ್ರಮುಖ ನಗರಗಳಲ್ಲಿ ಸಾವಿರ ಜನರು ಶ್ವೇತಭವನದತ್ತ ಪಾದಯಾತ್ರೆ ನಡೆಸಿದರು. ಅಮೆರಿಕ ಮಾತ್ರವಲ್ಲದೆ ಲಂಡನ್, ಪ್ಯಾರಿಸ್ ಮತ್ತು ರೋಮ್ನಂತಹ ಯುರೋಪಿಯನ್ ನಗರಗಳಲ್ಲೂ ಐಕಮತ್ಯದ ಪ್ರತಿಭಟನೆಗಳು ದಾಖಲಾಗಿವೆ.