Connect with us

LATEST NEWS

ಯಕ್ಷಗಾನದಲ್ಲೂ ಪುಷ್ಪ ಸಿನೆಮಾದ ಶ್ರೀವಲ್ಲಿ ಹಾಡು… ವಿಡಿಯೋ ವೈರಲ್

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿರುವ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ: ದಿ ರೈಸ್’ ಸಿನಿಮಾದ ಹಾಡುಗಳು ಇದೀಗ ಕರಾವಳಿಯ ಯಕ್ಷಗಾನದಲ್ಲೂ ಕಾಣಿಸಿಕೊಂಡಿದ್ದು, ಭಾಗವತರದ ಸ್ವರದಲ್ಲಿ ಪುಷ್ಪ ಸಿನೆಮಾದ ಶ್ರೀವಲ್ಲಿ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ತೆಲುಗು ಸಿನೆಮಾ ಪುಷ್ಪದ ಹಾಡುಗಳು ಈಗಾಗಲೇ ದೇಶ ವಿದೇಶಗಳ ಸೆಲೆಬ್ರೆಟಿಗಳು ಮನಸೋತಿದ್ದಾರೆ. ಇದೀಗ ಶ್ರೀವಲ್ಲಿ ಹಾಡು ನಮ್ಮ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೂ ಪ್ರವೇಶ ಮಾಡಿದೆ.


ಈ ಹಾಡನ್ನು ಯಕ್ಷಗಾನದಲ್ಲಿ ಅಳವಡಿಸಿದ್ದು ಮಾತ್ರವಲ್ಲದೆ, ಭಾಗವತರು ಹಾಡಿದ ಈ ಹಾಡಿಗೆ ಯಕ್ಷಗಾನ ಕಲಾವಿದರೊಬ್ಬರು ತಕ್ಕದಾದ ನೃತ್ಯವನ್ನು ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು ಮಾತ್ರವಲ್ಲದೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದಾರೆ. ಇದೀಗ ಈ ನೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಪ್ರಶಂಸೆ ಮಾಡುತ್ತಿದ್ದರೆ .

Advertisement
Click to comment

You must be logged in to post a comment Login

Leave a Reply