ಪುಂಜಾಲಕಟ್ಟೆ ನವೆಂಬರ್ 19: ಸ್ಕೂಟರ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರೆ ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬಲ್ಲಿ ನ.19ರ ಬುಧವಾರ ಮಧ್ಯಾಹ್ನ ಸಂಭವಿಸಿದೆ.


ಸ್ಕೂಟರ್ ಸವಾರೆ, ಕಡಬ ನಿವಾಸಿ ಸುನಿಲ್ ಎಂಬವರ ಪುತ್ರಿ ಅನನ್ಯಾ (21) ಮೃತಪಟ್ಟವರು. ಸ್ಕೂಟರ್ ನಲ್ಲಿದ್ದ ಮತ್ತೊರ್ವ ಸವಾರೆ, ಗುರುವಾಯನಕೆರೆ ನಿವಾಸಿ ಪೃಥ್ವಿ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಚಿಕಿತ್ಸಗೆ ದಾಖಲಿಸಲಾಗಿದೆ. ಇಬ್ಬರೂ ಮಂಗಳೂರು ಕಾಲೇಜಿನ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.  ಇಬ್ಬರೂ‌ ಬೆಳ್ತಂಗಡಿಯಿಂದ ಕಾಲೇಜಿಗೆ ಹೋಗುವ ವೇಳೆ ಈ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.  ‌‌‌‌ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಆಗಮಿಸಿದ್ದು,  ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share Information