LATEST NEWS
ಪುಣೆ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ದಂತ ವೈದ್ಯೆ ಸಾವು
ಮಂಗಳೂರು ಸೆಪ್ಟೆಂಬರ್ 14 : ಸ್ಕೂಟರ್ ಮತ್ತು ಟ್ರಕ್ ನಡುವೆ ನಡೆದ ಅಪಘಾತದಲ್ಲಿ ಮಂಗಳೂರು ಮೂಲದ ದಂತ ವೈದ್ಯೆಯೊಬ್ಬರು ಸಾವನಪ್ಪಿರುವ ಘಟನೆ ಪುಣೆಯ ಪಿಂಪ್ರಿಯಲ್ಲಿ ನಡೆದಿದೆ.
ಮೃತರನ್ನು ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದ ಮೂಲತಃ ಮಂಗಳೂರಿನ ವೆಲೆನ್ಸಿಯ ನಿವಾಸಿ, ಜಿಶಾ ಜೋನ್ (27) ಎಂದು ಗುರುತಿಸಲಾಗಿದೆ.
ಇವರು ಸ್ಕೂಟರ್ನಲ್ಲಿ ಮನೆಗೆ ಹಿಂತಿರುಗುವ ವೇಳೆ ಸ್ಕೂಟರ್ಗೆ ಟ್ರಕ್ ಢಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರು ಸಾವನ್ನಪ್ಪಿದರು. ಜಿಶಾ ಅವರ ಪತಿ ಪುಣೆಯಲ್ಲಿ ಉದ್ಯಮಿಯಾಗಿದ್ದಾರೆ. ಮೃತ ಜಿಶಾ ಅವರು ಪತಿ, ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
You must be logged in to post a comment Login