LATEST NEWS
ಮಾರ್ಚ್ 15 ಕ್ಕೆ ಪಂಪ್‌ವೆಲ್ ಫ್ಲೈ ಓವರ್ ವಾಹನಗಳ ಸಂಚಾರಕ್ಕೆ ಮುಕ್ತ : ಸಂಸದ ಕಟೀಲ್

ಮಾರ್ಚ್ 15 ಕ್ಕೆ ಪಂಪ್‌ವೆಲ್ ಫ್ಲೈ ಓವರ್ ವಾಹನಗಳ ಸಂಚಾರಕ್ಕೆ ಮುಕ್ತ : ಸಂಸದ ಕಟೀಲ್
ಮಂಗಳೂರು, ಫೆಬ್ರವರಿ 28 : ಇದೇ ಮಾರ್ಚ್ 15 ರಂದು ಕಳೆದ 9 ವರ್ಷಗಳಿಂದ ನೆನೆಗುದಿಗೆ ಬಿದ್ದು ಸಾರ್ವಜನಿಕರಿಂದ ಟ್ರೋಲ್ ಆದ ಮಂಗಳೂರಿನ ಕಂಕನಾಡಿ ಪಂಪ್‌ವೆಲ್ ಫ್ಲೈ ಓವರ್ ಉದ್ಘಾಟನೆಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಆಶ್ವಾಸನೆ ನೀಡಿದ್ದಾರೆ,
ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವರ ಕಾರ್ಯದರ್ಶಿ ವೈಭವ್ ದಾಂಘೆ ಯವರೊಂದಿಗೆ ಸಂಸದ ನಳಿನ್ ಕುಮಾರ್ ಕಟೀಲು ತೊಕ್ಕೊಟ್ಟು ಮತ್ತು ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿಯನ್ನ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಮಾಚ್ 15 ರೊಳಗಾಗಿ ಪಂಪ್ ವೆಲ್ ಮತ್ತು ತೊಕ್ಕೊಟ್ಟುವಿನಲ್ಲಿನ ಮೇಲ್ಸೇತುವೆಗಳು ಕ್ಲಿಯರ್ ಆಗಲಿದೆ.
ಕಳೆದ 10 ವರ್ಷಗಳಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿಗೆ ಪ್ರಾರಂಭದಲ್ಲಿ ಮಹಾವೀರ ಸರ್ಕಲ್ ತೆರವುಗೊಳಿಸುವ ಕುರಿತು ಗೊಂದಲ ಮೂಡಿತ್ತು.
ಆನಂತರ ಮಾಜಿ ಶಾಸಕ ಜೆ. ಆರ್ ಲೋಬೋರವರಿಂದಾಗಿ ಕಾಮಗಾರಿಗೆ ವಿಳಂಬವಾಯ್ತು. ಆರ್ಥಿಕ ಸಮಸ್ಯೆಯಿಂದ ಗುತ್ತಿಗೆದಾರ ಕಂಪನಿಗೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಇದೀಗ ಆರ್ಥಿಕ ಸಮಸ್ಯೆಯೂ ಪರಿಹಾರವಾಗಿದ್ದು ಜೊತೆಗೆ ಕೇಂದ್ರ ಸರ್ಕಾರದಿಂದ 7 ಕೋಟಿ ರೂಪಾಯಿಯನ್ನು ವಿಶೇಷವಾಗಿ ಬಿಡುಗಡೆಗೊಳಿಸಲಿದ್ದೇವೆ.
ಆದಷ್ಟು ಬೇಗ ಕಾಮಗಾರಿ ಪೂರ್ತಿಗೊಳಿಸಿ ಲೋಕರ್ಪಣೆಗೊಳಿಸಲಾಗುವುದು ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ , ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಹಾಗೂ ನವಯುಗ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.