Connect with us

    DAKSHINA KANNADA

    ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ ವಿಟ್ಲದಲ್ಲಿ ಎರಡು ಕೇರಳಕ್ಕೆ ತೆರಳುವ ರಾಜ್ಯ ಸರಕಾರಿ‌ ಬಸ್ ಗೆ ಕಲ್ಲು

    ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ ವಿಟ್ಲದಲ್ಲಿ ಎರಡು ಕೇರಳಕ್ಕೆ ತೆರಳುವ ರಾಜ್ಯ ಸರಕಾರಿ‌ ಬಸ್ ಗೆ ಕಲ್ಲು

    ಪುತ್ತೂರು ಜೂನ್ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡುವ ಪ್ರಯತ್ನಗಳು ನಡೆಯಲಾರಂಭಿಸಿದೆ. ಅಕ್ರಮ ಗೋ ಸಾಗಾಟ ಹಾಗೂ ಅದನ್ನು ತಡೆಯುವ ಘಟನೆಗಳು ಇದೀಗ ಮತ್ತೆ ಆರಂಭಗೊಂಡಿದೆ.

    ಮಂಗಳೂರಿನ ಜೋಕಟ್ಟೆಯಲ್ಲಿ ಅಕ್ರಮ ಗೋ ಸಾಗಾಟವನ್ನು ಹಿಡಿದ ಪೋಲೀಸರ ಕ್ರಮದ ಬಳಿಕ, ನ್ಯಾಯಾಲಯ ಎಲ್ಲಾ ಜಾನುವಾರುಗಳನ್ನು ಮತ್ತೆ ಅದರ ಮಾಲೀಕರಿಗೆ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಸಂಭ್ರಮಾಚರಣೆಯ ಮೂಲಕ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಹಾಗೂ ಗೋರಕ್ಷಕರೇ ತಾಕತ್ತಿದ್ದರೆ ಜೋಕಟ್ಟೆಗೆ ಬನ್ನಿ ಎನ್ನುವ ಆಹ್ವಾನ ನೀಡಲಾಗಿತ್ತು.

    ಈ ಘಟನೆಯ ಬಳಿಕ ಹಿಂದೂ ಸಂಘಟನೆಗಳು ವಿಟ್ಲದಲ್ಲಿ ಅಕ್ರಮ ಗೋಸಾಗಾಟ ವಾಹನವನ್ನು ತಡೆಹಿಡಿದು , ಅದರ ಮುಂದೆ ಪಟಾಕಿ ಸಿಡಿಸಿ ಜೋಕಟ್ಟೆಯ ಘಟನೆಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಈ ನಡುವೆ ವಿಟ್ಲ- ಕೇರಳ ಗಡಿಭಾಗದಲ್ಲಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ತಂಡ ವಾಹನದಲ್ಲಿದ್ದವರಿಗೆ ಥಳಿಸಿ ವಿಟ್ಲ ಪೋಲೀಸ್ ಠಾಣೆಗೆ ಒಪ್ಪಿಸಿದ್ದರು.

    ಈ ಘಟನೆ ಕೇರಳ ವ್ಯಾಪ್ತಿಯಲ್ಲಿ ನಡೆದ ಹಿನ್ನಲೆಯಲ್ಲಿ ಕೇರಳ ಪೋಲೀಸರು ಪ್ರಕರಣ ದಾಖಲಿಸಿ ಆರು ಮಂದಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಈ ಬಂಧನವನ್ನು ಖಂಡಿಸಿ ಇದೀಗ ಹಿಂದೂ ಘಟನೆಗಳು ಪ್ರತಿಭಟನೆಯ ಹಾದಿಯನ್ನೂ ಹಿಡಿದಿದೆ. ಇಂದು ಇದರ ಮುಂದಿನ ಭಾಗವಾಗಿ ವಿಟ್ಲದಲ್ಲಿ ಎರಡು ಕೇರಳಕ್ಕೆ ಹೋಗುವ ರಾಜ್ಯ ಸರಕಾರಿ‌ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

    ಅಲ್ಲದೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ದಾಸಕೋಡಿ, ಗಡಿಯಾರ,ಕುದ್ರಬೆಟ್ಟು ಮತ್ತು ಪಾಣೆಮಂಗಳೂರಿನಲ್ಲಿ ಎರಡು ಸರಕಾರಿ ಹಾಗೂ ಮೂರು‌ ಖಾಸಗಿ ಬಸ್ ಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆಯಲ್ಲಿ ಇಬ್ಬರು ವಿಧ್ಯಾರ್ಥಿಗಳಿಗೆ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ, ಪುತ್ತೂರು ಹಾಗೂ ಬಂಟ್ವಾಳ ಪೋಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply