ಮಂಗಳೂರು ಸೆಪ್ಟೆಂಬರ್ 10: ರಾಷ್ಟ್ರೀಯ ಹೆದ್ದಾರಿಯಲ್ಲಿನ ಹೊಂಡಗಳಿಂದಾಗಿ ಸಾರ್ವಜನಿಕರ ಪ್ರಾಣ ಹಾನಿಯಾಗುತ್ತಿರುವ ಹಿನ್ನಲೆ ಇದೀಗ ಕಾಂಗ್ರೇಸ್ ಸೆಪ್ಟಂಬರ್ 12 ರಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ದುರಸ್ಥಿ ಒತ್ತಾಯಿಸಿ, ರಾಷ್ಟ್ರೀಯ ಹೆದ್ಧಾರಿ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಶಾಸಕ ಐವನ್ ಡಿಸೋಜಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚಿಗೆ ನಡೆದ ಅನೇಕ ಅಪಘಾತಗಳು ಅಮಾಯಕರ ಜೀವವನ್ನು ಬಲಿ ಪಡೆದಿದ್ದು, ರಾಷ್ಟ್ರೀಯ ಹೆದ್ದಾರಿಯ ನಾದುರಸ್ಥಿಯೇ ಪ್ರಮುಖ ಕಾರಣವಾಗಿರುತ್ತದೆ. ರಾಷ್ಟ್ರೀಯ ಹೆದ್ಧಾರಿ ಯಾವುದೇ ದುರಸ್ಥಿ ಕಾರ್ಯಕ್ರಮ ಮಾಡದೇ ಇರುವುದರಿಂದ ದಿನಾಂಕ:12.09.2025 (ಶುಕ್ರವಾರ ಬೆಳಿಗ್ಗೆ 10:30 ಗಂಟೆಗೆ ನಂತೂರಿನ ಜಂಕ್ಷನಲ್ಲಿ ಪ್ರತಿಭಟನೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.



