Connect with us

    LATEST NEWS

    ಕುಂಟಿಕಾನ : ಅಪಾರ್ಟ್ ಮೆಂಟ್ ತಡೆಗೋಡೆ ಕುಸಿತ..10ಕ್ಕೂ ಅಧಿಕ ಕಾರು ಮಣ್ಣಿನಡಿ

    ಮಂಗಳೂರು ಸೆಪ್ಟೆಂಬರ್ 11: ಮಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಂಟಿಕಾನದಲ್ಲಿರುವ ವಸತಿ ಸಮುಚ್ಛಯವೊಂದರ ತಡೆಗೋಡೆ ಕುಸಿದು ಬಿದ್ದಿರುವ ಘಟನೆ ನಡೆದಿದೆ.


    ಜಿಲ್ಲೆಯಲ್ಲಿ ನಿನ್ನೆಯಿಂದ ಒಂದೇ ಸಮನೆ ಧಾರಾಕಾರ ಮಳೆಯಾಗುತ್ತಿದ್ದು, ನಗರದ ಕುಂಟಿಕಾನದಲ್ಲಿರುವ ಅಪಾರ್ಟ್ ಮೆಂಟ್ ಒಂದರ ತಡೆಗೋಡೆಯ ಒಂದು ಭಾಗ ಕುಸಿದು ಹಿಂಬದಿಯ ಹಾಸ್ಟೆಲ್‌ ಆವರಣದೊಳಗೆ ಬಿದ್ದಿದೆ. ಈ ಮಣ್ಣಿನಡಿ ಸುಮಾರು 10ಕ್ಕೂ ಅಧಿಕ ಕಾರುಗಳು ಹೂತು ಹೋಗಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದು ಭಾಗದ ಗೋಡೆಯು ಕೂಡಾ ಕುಸಿಯುವ ಆತಂಕ ಸೃಷ್ಟಿಯಾಗಿದ್ದು ಈ ಹಿನ್ನೆಲೆ ಇನ್ನೂ ಕೂಡಾ ಕಾರ್ಯಾಚರಣೆ ಆರಂಭವಾಗಿಲ್ಲ ಎಂದು ಹೇಳಲಾಗಿದೆ.

    ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply