LATEST NEWS
ಕುಂಜಿಬೆಟ್ಟು ಚಾಮುಂಡಿಶ್ವೇರಿ ಗುಡಿಯ ಗರ್ಭಗುಡಿಯೊಳಗೆ ನಾಗರಹಾವಿನ ರಕ್ಷಣೆ
ಉಡುಪಿ , ಜನವರಿ 21 :ಉಡುಪಿ ನಗರದ ಕುಂಜಿಬೆಟ್ಟು ಮೀನು ಮಾರುಕಟ್ಟೆ ರಸ್ತೆ ಬಳಿ ಇರುವ, ಚಾಮುಂಡಿಶ್ವೇರಿ ಗುಡಿಯ ಗರ್ಭಗುಡಿಯೊಳಗೆ, ಆಶ್ರಯಪಡೆದಿರುವ ನಾಗರಹಾವನ್ನು ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ.
ಅರ್ಚಕ ವಿಘ್ನೇಶ್ ಅವರು ಪೂಜೆ ನೆರವೆರಿಸಲು ಗರ್ಭಗುಡಿಯೊಳಗೆ ಪ್ರವೇಶಿಸಿದಾಗ, ನಾಗರ ಹಾವು ವಿಗ್ರಹದ ಸನಿಹ ಮಲಗಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಅರ್ಚಕರು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರಿಗೆ ವಿಷಯ ಮುಟ್ಟಿಸಿದ್ದಾರೆ.
ತಕ್ಷಣ ಕಾರ್ಯಕರ್ತರು, ಹಾವು ಹಿಡಿಯಲು ಪರಿಣಿತಿ ಹೊಂದಿರುವ, ಅಂಬಾಗಿಲಿನ ಯು.ಬಿ.ನಾಗರಾಜ್ ಅವರ ಮೂಲಕ, ಮೂರು ಅಡಿ ಉದ್ದದ ನಾಗರಹಾವನ್ನು ಸೆರೆಹಿಡಿದು, ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡುಗಡೆಗೊಳಿಸಿದ್ದಾರೆ.
Video: