ಬಂಟ್ವಾಳದ ಮಿನಿವಿಧಾನ ಸೌಧದಲ್ಲಿ ವಿಕಲಚೇತನರೊಬ್ಬರು 3ನೇ ಮಹಡಿಗೆ ಹೋಗಲು ಮೇಟ್ಟಿಲು ಎರುತ್ತಿರುವ ಮನಕಲಕುವ ದೃಶ್ಯ

ಮಂಗಳೂರು ಮೇ 15: ಬಂಟ್ವಾಳದ ಮಿನಿ ವಿಧಾನ ಸೌಧ ಕಚೇರಿಯಲ್ಲಿ ಅಂಗವಿಕಲರೊಬ್ಬರು ಮೆಟ್ಟಿಲುಗಳನ್ನು ಬಳಸಿ 3ನೇ ಮಹಡಿ ತೆರಳುತ್ತಿರುವ ಪೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿನಿ ವಿಧಾನಸೌಧದಲ್ಲಿರುವ ಮೂಲಭೂತ ಸೌಕರ್ಯಗಳು ನಿಷ್ಕ್ರೀಯವಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳದ ಬಿಸಿ ರೋಡ್ ನಲ್ಲಿರುವ ಮಿನಿ ವಿಧಾನ ಸೌಧದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನರು ತೊಂದರೆ ಪಡುವಂತಾಗಿದೆ. ಕಳೆದ ಒಂದು ತಿಂಗಳಿನಿಂದ ಮಿನಿವಿಧಾನ ಸೌಧ ಕಚೇರಿಯಲ್ಲಿ ನ ಲಿಪ್ಟ್ ಕೆಟ್ಟು ಹೋಗಿದ್ದು ವಿಕಲಚೇತನರ ಸಹಿತ ಅನಾರೋಗ್ಯ ಪೀಡಿತ ಜನರು ಮೆಟ್ಟಿಲು ಗಳ ಮೂಲಕ ಹತ್ತಿಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗವಿಕಲರೊಬ್ಬರು 3ನೇ ಮಹಡಿಗೆ ತೆರಳು ಮೆಟ್ಟಲು ಏರುತ್ತಿರುವ ಪೋಟೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿನಿ ವಿಧಾನ ಸೌಧದ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತಿತ್ತು.

ಮಿನಿ ವಿಧಾನ ಸೌಧದಲ್ಲಿ ಸೌಕರ್ಯಗಳ ನಿಷ್ಕ್ರೀಯತೆ ಬಗ್ಗೆ ಸಾರ್ವಜನಿಕರು ಇಲ್ಲಿನ ಅಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಕಳೆದ ಒಂದು ತಿಂಗಳಿನಿಂದ ಕಚೇರಿಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣ ವಾಗಿದ್ದು ಈ ಬಗ್ಗೆ ತಹಶೀಲ್ದಾರರಿಗೆ ಸರಿ ಮಾಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸಿದ್ದಾರೆ.