Connect with us

    LATEST NEWS

    ಇನ್ನು ಅಗತ್ಯ ವಸ್ತುಗಳ ಖರೀದಿಗೆ ವಾಹನ ರಸ್ತೆಗಿಳಿದರೆ ಸೀಜ್

    ಇನ್ನು ಅಗತ್ಯ ವಸ್ತುಗಳ ಖರೀದಿಗೆ ವಾಹನ ರಸ್ತೆಗಿಳಿದರೆ ಸೀಜ್

    ಮಂಗಳೂರು ಎಪ್ರಿಲ್ 2: ಕೊರೊನಾ ಲಾಕ್ ಡೌನ್ ನ್ನು ಕಟ್ಟು ನಿಟ್ಟಿನಲ್ಲಿ ಜಾರಿಗೆ ಗೊಳಿಸಲು ದಕ್ಷಿಣಕನ್ನಡ ಜಿಲ್ಲಾಡಳಿತ ಉದ್ದೇಶಿದ್ದು, ಇಲ್ಲಿಯವರೆಗೆ ಅಗತ್ಯವಸ್ತುಗಳ ಖರೀದಿ ಸಂದರ್ಭ ವಾಹನಗಳ ಬಳಕೆಗೆ ಇದ್ದ ಅವಕಾಶವನ್ನು ನಿಲ್ಲಿಸಲಾಗಿದ್ದು , ಅಗತ್ಯ ವಸ್ತುಗಳ ಖರೀದಿಗೆ ಮನೆ ಸುತ್ತಮುತ್ತ ಇರುವ ದಿನಸಿ ಅಂಗಡಿಗಳಿಗೆ ನಡೆದುಕೊಂಡು ಹೋಗಿ ಖರೀದಿ ಮಾಡಲು ತಿಳಿಸಲಾಗಿದೆ.

    ಕೊರೊನಾ ಸೋಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಳ್ಳುತ್ತಿದ್ದು, ಇದರಂತೆ ಇಂದು ಕ್ರಮಗಳ ಕುರಿತಂತೆ ಹೊಸ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಜಿಲ್ಲಾಡಳಿತದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದ್ದಾರೆ.

    ಈ ಆದೇಶ ಇಂದಿನಿಂದ ಏಪ್ರಿಲ್ 14ರ ಮಧ್ಯರಾತ್ರಿ 12 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಹೊಸ ಆದೇಶದ ಪ್ರಕಾರ ಇನ್ನು ಮುಂದೆ ಯಾವುದೇ ಖಾಸಗಿ ವಾಹನ ರಸ್ತೆಗಳಿಯುವಂತಿಲ್ಲ, ತಮ್ಮ ಅಗತ್ಯ ವಸ್ತುಗಳ ಖರೀದಿಗೂ ಕೂಡ ತಮ್ಮ ಮನೆಯ ಆಸುಪಾಸಿನಲ್ಲಿರುವ ಅಂಗಡಿಗಳಿಗೆ ನಡೆದುಕೊಂಡೇ ತೆರಳಬೇಕೆಂದು ಆದೇಶಿಸಲಾಗಿದೆ.

    ಒಂದು ವೇಳೆ ಆದೇಶ ಉಲ್ಲಂಘಿಸಿ ರಸ್ತೆಗಿಳಿದರೆ ವಾಹನಗಳನ್ನು ಪ್ರಕರಣ ದಾಖಲಿಸಿ ಮುಟ್ಟುಗೋಲು ಹಾಕುವ ಕಾರ್ಯ ಈಗಾಗಲೇ ಮಂಗಳೂರಿನಲ್ಲಿ ಆರಂಭಿಸಲಾಗಿದ್ದು ಇದಕ್ಕಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಏಪ್ರಿಲ್ 14 ಮಧ್ಯರಾತ್ರಿಯವರೆಗೆ ಈ ಆದೇಶ ಜಾರಿಯಲ್ಲಿದೆ. ಅಧಿಕೃತ ಪಾಸ್ ಹೊಂದಿದವರಷ್ಟೇ ನಗರದಲ್ಲಿ ಅಗತ್ಯ ಕೆಲಸಗಳಿಗೆ ಹೋಗಲು ಅವಕಾಶ ಎಂದು ಮಂಗಳೂರು ನಗರ ಪೊಲೀಸ್‌ ಅಯುಕ್ತರಾದ ಡಾ. ಹರ್ಷ ಎಚ್ಚರಿಕೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply