Connect with us

    KARNATAKA

    ಖಾಸಗಿ ವಿಡಿಯೋ ವೈರಲ್ ಮಾಡಿದ ಪ್ರಿಯಕರನ ಮುಗಿಸಿದ ಪ್ರಿಯತಮೆ….!!

    ಬೆಂಗಳೂರು ಸೆಪ್ಟೆಂಬರ್ 20: ತನ್ನ ಖಾಸಗಿ ವಿಡಿಯೋ ಹಾಗೂ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಕ್ಕೆ ಆಕ್ರೋಶಗೊಂಡ ಪ್ರಿಯತಮೆ ತಾನು ಮದುವೆಯಾಗಬೇಕಿದ್ದ ಪ್ರಿಯಕರನನ್ನೆ ಮುಗಿಸಿದ್ದಾಳೆ. ಬೆಂಗಳೂರಿನ ಬೆಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿಕಾಸ್‌ ಕೊಲೆಯಾದ ಪ್ರಿಯಕರ. ಪ್ರತೀಷಾ ಮತ್ತು ಆಕೆಯ ಸ್ನೇಹಿತರಾದ ಸುಶೀಲ್ ಗೌತಮ್ ಬಂಧಿತರು. ಮತ್ತೊಬ್ಬ ಆರೋಪಿ ಸೂರ್ಯ ತಲೆಮರೆಸಿಕೊಂಡಿದ್ದಾನೆ.


    ಚೆನ್ನೈ ಮೂಲದ ವಿಕಾಸ್ ವೈದ್ಯನಾಗಿದ್ದು, ಬಿಟಿಎಂ ಲೇಔಟ್ ನಲ್ಲಿ ವಾಸವಾಗಿದ್ದ, ಆತ ಪ್ರತೀಷಾ ಇಬ್ಬರು ಪ್ರೀತಿ ಮಾಡುತ್ತಿದ್ದ, ಆದರೆ ಆಕೆಯ ಜೊತೆಗಿದ್ದ ಖಾಸಗಿ ಕ್ಷಣಗಳಿದ್ದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಿದ್ದ, ಈ ವಿಷಯ ತಿಳಿದ ಪ್ರತೀಷಾ ತನ್ನ ಗೆಳೆಯರಿಗೆ ವಿಷಯ ತಿಳಿಸಿದ್ದಳು. ಸ್ನೇಹಿತರ ಜೊತೆ ಸೇರಿ ನೆಲ ಒರೆಸುವ ಮಾಪ್ ಮತ್ತು ಪ್ಲಾಸ್ಟಿಕ್ ಬಾಟಲ್ ನಿಂದ ವಿಕಾಸ್ ಮೇಲೆ ಹಲ್ಲೆ ನಡೆಸಿದ್ದರು, ನಂತರ ವಿಕಾಸ್ ನನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು, ಎರಡು ದಿನ ಕೋಮಾದಲ್ಲಿದ್ದ ವಿಕಾಸ್ ಸಾವನ್ನಪ್ಪಿದ್ದ.

    Share Information
    Advertisement
    Click to comment

    You must be logged in to post a comment Login

    Leave a Reply