ಸುಳ್ಯದಲ್ಲಿ ಪೊಲೀಸರಿಗೆ ಚಳ್ಳೆಹಣ್ಣಿ ತಿನ್ನಿಸಿ ಕಳ್ಳ ಪರಾರಿ

ಸುಳ್ಯ ಸೆಪ್ಟೆಂಬರ್ 14: ಕುಖ್ಯಾತ ಆರೋಪಿಯೊಬ್ಬ ಪೋಲೀಸ್ ರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ.

ಅಬ್ದುಲ್ ಅಜೀಜ್ ( 40) ಪೋಲೀಸ್ ಕೈಯಿಂದ ತಪ್ಪಿಸಿಕೊಂಡ ಆರೋಪಿಯಾಗಿದ್ದು, ಈತ ಕೇರಳದ ಕಾಞಂಗಾಡ್ ಸಬ್ ಜೈಲಿನಲ್ಲಿದ್ದ ಬಂಧಿಯಾಗಿದ್ದ.

ಸುಳ್ಯದಲ್ಲಿ ನಡೆದ ಬಿಎಸ್ಎನ್ಎಲ್ ಕಛೇರಿ ಕಳವು ಪ್ರಕರಣದ ಆರೋಪಿಯಾಗಿರುವ ಅಬ್ದುಲ್ ಅಜೀಜ್ ನನ್ನು ಇಂದು ಸುಳ್ಯ ನ್ಯಾಯಾಲಯಕ್ಕೆ ಕರೆತಂದ ಸಂದರ್ಭದಲ್ಲಿ ಬಸ್ ನಿಲ್ದಾಣದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾನೆ.

ಸುಳ್ಯದ ಅಜ್ಜಾವರ ನಿವಾಸಿಯಾಗಿರುವ ಅಬ್ದುಲ್ ಅಜೀಜ್ ಕೇರಳದಲ್ಲಿ ನಡೆದ ಕೊಲೆ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದು ಕೇರಳದ ಕಾಞಂಗಾಡ್ ಸಬ್ ಜೈಲಿನಲ್ಲಿ ಈತನನ್ನು ಇಡಲಾಗಿತ್ತು.

ಸುಳ್ಯದ ಪ್ರಕರಣ ಸಂಬಂಧ ಇಂದು ಸುಳ್ಯದ ನ್ಯಾಯಾಲಯಕ್ಕೆ ಕರೆತರಲಾಗಿತ್ತು, ಈ ನಡುವೆ ಆರೋಪಿ ಪೊಲೀಸ್ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆರೋಪಿ ಹುಡುಕಾಟಕ್ಕಾಗಿ ಸುಳ್ಯದಾದ್ಯಂತ ನಾಕಾಬಂಧಿ ಮಾಡಲಾಗಿದ್ದು, ಪೊಲೀಸ್ ತೀವ್ರ ತಪಾಸಣೆಯಲ್ಲಿ ತೊಡಗಿದ್ದಾರೆ.

3 Shares

Facebook Comments

comments