ಉಡುಪಿ ಸೆಪ್ಟೆಂಬರ್ 20: ಶಂಕರಪುರ ಮಲ್ಲಿಗೆ ಅಥವಾ ಉಡುಪಿ ಮಲ್ಲಿಗೆ ಇದೀಗ ಹಬ್ಬದ ಸೀಸನ್ ಪ್ರಾರಂಭವಾಗುತ್ತಿರುವುದರ ಬೆನ್ನಲ್ಲೇ ಹೂವಿನ ದರ ಏರಿಕೆಯತ್ತ ಸಾಗಿತ್ತಿದೆ. ಈಗಾಗಲೇ ಒಂದು ಚೆಂಡಿಗೆ (3 ಅಡಿ) ₹600ಕ್ಕೆ ತಲುಪಿದೆ.

ನಿರಂತರ ಮಳೆಯಿಂದಾಗಿ ಮಲ್ಲಿಗೆ ಕೃಷಿಗೆ ಪೆಟ್ಟು ಬಿದ್ದಿದ್ದು, ಇಳುವರಿ ಕಡಿಮೆಯಾಗಿದೆ. ಇದೀಗ ಹಬ್ಬದ ಸೀಸನ್ ಪ್ರಾರಂಭವಾಗಿರುವ ಹಿನ್ನಲೆ ಮಲ್ಲಿಗೆ ಬೆಲೆ ಏರಿಕೆಯಾಗುತ್ತಿದೆ. ವಾರದ ಹಿಂದೆ ಒಂದು ಅಟ್ಟಿಗೆ (ನಾಲ್ಕು ಚೆಂಡು) ₹400ಕ್ಕೆ ದೊರೆಯುತ್ತಿದ್ದ ಉಡುಪಿ ಮಲ್ಲಿಗೆ ದರ 4–5 ದಿನಗಳಿಂದ ಏರುತ್ತಲೇ ಇದೆ. ‘ಮಳೆಗೆ ಮೊಗ್ಗುಗಳು ಹಾಳಾಗಿದ್ದು, ಇಳುವರಿ ಕಡಿಮೆ ಆಗಿರುವ ಕಾರಣ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಉಳಿದಂತೆ, ಜಾಜಿ ಹೂ ಚೆಂಡಿಗೆ ₹130, ಕಾಕಡಾ ಮಲ್ಲಿಗೆ ಮೊಳಕ್ಕೆ ₹50 ದರವಿದೆ.



