Connect with us

    FILM

    ದೇವಸ್ಥಾನಕ್ಕೂ ಹೋಗೊದು ತಪ್ಪು ಅಂದರೆ ಏನು ಮಾಡುವುದು – ನಟಿ ಪ್ರೇಮಾ

    ಬೆಂಗಳೂರು ಜನವರಿ 25: ಇತ್ತೀಚೆಗೆ ಕೊರಗಜ್ಜನ ಗುಡಿಯಲ್ಲಿ ನಟಿ ಪ್ರೇಮ ಅವರು ತಮ್ಮ ಎರಡನೇ ಮದುವೆ ಬಗ್ಗೆ ಕೇಳಿ ಕೊಂಡಿದ್ದಾರೆ ಎಂಬ ವೈರಲ್ ಸುದ್ದಿಗೆ ಇದೀಗ ಪ್ರೇಮ ಸ್ಪಷ್ಟನೆ ನೀಡಿದ್ದು, ನಾನು ಸದ್ಯಕ್ಕೆ ಎರಡನೇ ಮದುವೆ ಆಗುವುದಿಲ್ಲ ಎಂದಿದ್ದಾರೆ.

    ದೇವಸ್ಥಾನಕ್ಕೂ ಹೋಗೊದು ತಪ್ಪು ಅಂದರೆ ಏನು ಮಾಡುವುದು? ತುಂಬಾ ದಿನ ಆಗಿತ್ತು ಅಂತ ಕೊರಗಜ್ಜನ ದೇವಾಲಯಕ್ಕೆ ಹೋಗಿದ್ದೆ ಎಂದಿದ್ದಾರೆ ಪ್ರೇಮ. ಅಲ್ಲಿ ನಾನು ನನ್ನ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾನು ಇನ್ನು ಸಾಕಷ್ಟು ಸಾಧಿಸಬೇಕಾದದ್ದು ಇದೆ. ನಾನು ಮದುವೆ ಅದರೆ ನನ್ನ ಕುಟುಂಬ ಹಾಗೂ ಅಭಿಮಾನಿಗಳ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

    ಹಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದು ಒಂಟಿಯಾಗಿ ಜೀವನ ಸಾಗಿಸುತ್ತಿರುವ ನಟಿ ಪ್ರೇಮಾ ಇದೀಗ 2ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಕಂಕಣ ಭಾಗ್ಯ ಕರುಣಿಸುವಂತೆ ದೈವದ ಮೋರೆ ಹೋಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು.
    ಕಾಪು ಕೊರಗಜ್ಜ ಸನ್ನಿಧಿಯಲ್ಲಿ ಮದುವೆಗಾಗಿ ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿತ್ತು. ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ನಟಿ ಪ್ರೇಮಾ ಕೊರಗಜ್ಜನ ಸನ್ನಿಧಿಗೂ ಭೇಟಿ ನೀಡಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply