Connect with us

LATEST NEWS

ಎಸ್ಪಿ ಬಾಲಸುಬ್ರಹ್ಮಣ್ಯಂ ಸ್ಥಿತಿ ಗಂಭೀರ- ವಿಶ್ವದಾದ್ಯಂತ ಅಭಿಮಾನಿಗಳಿಂದ ಇಂದು ಸಾಮೂಹಿಕ ಪ್ರಾರ್ಥನೆ

ಚೆನ್ನೈ ಅಗಸ್ಟ್ 20: ಜನಪ್ರಿಯ ಹಿನ್ನಲೆ ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿರುವ ಹಿನ್ನಲೆ ಎಸ್ ಪಿಬಿ ಅಭಿಮಾನಿಗಳು ಇಂದು ಅವರ ಶೀಘ್ರ ಚೇತರಿಕೆಗಾಗಿ ವಿಶ್ವದಾದ್ಯಂತ ಇಂದು ಪ್ರಾರ್ಥನೆ ಸಲ್ಲಿಸಲಿದ್ದಾರೆ.


ಸದ್ಯ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಸ್ ಪಿಬಿ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ನಿನ್ನೆ ಸಂಜೆ ಎಸ್‌ಪಿಬಿ ಅವರ ಆರೋಗ್ಯದ ಕುರಿತು ಹೆಲ್ತ್‌ ಬುಲೆಟಿನ್ ರಿಲೀಸ್ ಮಾಡಲಾಗಿದೆ. ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ ಎಂದು ತಿಳಿಸಲಾಗಿದೆ.

ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ಪಾಸಿಟಿವ್ ಆಗಿದ್ದರ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಅವರು ತೀವ್ರ ನಿಗಾ ಘಟಕದಲ್ಲಿದ್ದು, ವೆಂಟಿಲೇಟರ್‌ ಅಳವಡಿಸಲಾಗಿದೆ. ನುರಿತ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ಗಮನ ನೀಡಿದೆ’ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಮಾಹಿತಿ ನೀಡಿದೆ. ಆಗಸ್ಟ್‌ 5ರಂದು ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಆ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆ.13ರಿಂದ ಎಸ್‌ಪಿಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ಆರು ದಿನಗಳಿಂದ ಅವರು ಐಸಿಯುನಲ್ಲೇ ಇದ್ದಾರೆ. ಆರೋಗ್ಯದಲ್ಲಿ ಯಾವುದೇ ಗಮನಾರ್ಹ ಚೇತರಿಕೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.


ಇಂದು ಎಸ್‌ಪಿಬಿ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ತಮಿಳು ಚಿತ್ರರಂಗದ ನಟ, ನಟಿಯರು ಸಂಜೆ 6ಗಂಟೆಯಿಂದ 6.05ರವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಸೂಪರ್‌ ಸ್ಟಾರ್‌’ ರಜನಿಕಾಂತ್‌, ಕಮಲಹಾಸನ್‌, ಎ.ಆರ್‌. ರೆಹಮಾನ್‌, ಇಳೆಯರಾಜ, ಭಾರತಿರಾಜಾ ಸೇರಿದಂತೆ ಹಲವರು ಈ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋವಿಡ್‌–19 ಪರಿಣಾಮ ಸಾರ್ವಜನಿಕ ಸ್ಥಳದಲ್ಲಿ ಈ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿಲ್ಲ. ಬದಲಾಗಿ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಅವರ ಮನೆಗಳಲ್ಲಿಯೇ ಪಾಲ್ಗೊಳ್ಳಬೇಕು ಎಂದು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಕೋರಿದ್ದಾರೆ.

Facebook Comments

comments