Connect with us

DAKSHINA KANNADA

ಕಾಂಗ್ರೆಸ್ ನಾಯಕರು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರವೀಣ್ ಸಂಬಂಧಿಕರು

ಪುತ್ತೂರು ಜುಲೈ 31: ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಇಂದು ಕಾಂಗ್ರೇಸ್ ನಾಯಕರು ಆಗಮಿಸಿದ್ದು, ಈ ಸಂದರ್ಭ ಕಾಂಗ್ರೆಸ್ ನಾಯಕರ ವಿರುದ್ಧ ಪ್ರವೀಣ್ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.


ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಪ್ರವೀಣ್ ಮನೆಗೆ ಭೇಟಿ ನೀಡಿದ ಕಾಂಗ್ರೇಸ್ ಮುಖಂಡರ ವಿರುದ್ದ ಪ್ರವೀಣ್ ಸಂಬಂಧಿಕರು ದಿಕ್ಕಾರ ಕೂಗಿದ್ದು, ಮೊನ್ನೆ ಬರದವರು ಇಂದೇಕೆ ಬಂದಿದ್ದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಮನೆಯಿಂದ ಹೊರಗೆ ಹೋಗುವಂತೆ ಪ್ರವೀಣ್ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಬಳಿಕ ಮಾತನಾಡಿದ ಕಾಂಗ್ರೇಸ್ ಮುಖಂಡ ಬಿ.ಕೆ ಹರಿ ಪ್ರಸಾದ್ ರಾಜ್ಯ ಸರಕಾರದ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಗುಪ್ತಚರ ಇಲಾಖೆ ನಿಗಾ ಇಡಬೇಕಿತ್ತು. ತಮ್ಮ ಪಕ್ಷದವರನ್ನೇ ರಕ್ಷಿಸಲಾರದವರು ರಾಜ್ಯದ ಜನತೆಯನ್ನು ಹೇಗೆ ರಕ್ಷಿಸುತ್ತಾರೆ.

ಕೋಮುದ್ವೇಷದ ಭಾಷಣ ಮಾಡುವವರ ವಿರುದ್ಧ ಸರಕಾರ ಕಠಿಣ ಕ್ರಮ ಜರುಗಿಸಬೇಕು, ಕೆ.ಎಸ್.ಈಶ್ವರಪ್ಪ, ತೇಜಸ್ವಿ‌ ಸೂರ್ಯ ಮೊದಲಾದವರು ಕೋಮು ಪ್ರಚೋದನೆಯ ಮಾತನಾಡುತ್ತಾರೆ ಇಂಥವರ ವಿರುದ್ಧ ಕ್ರಮ ಆಗಬೇಕಿದೆ ಎಂದರು.


ರಾಜಸ್ಥಾನದ ಉದಯಪುರದಲ್ಲಿ ಆದ ಹತ್ಯೆಯ ಹಂತಕರನ್ನು ರಾಜಸ್ಥಾನ ಪೋಲೀಸರು ಎರಡು ದಿನದಲ್ಲಿ‌ ಬಂದಿಸಿದ್ದಾರೆ. ಆದರೆ ಪ್ರವೀಣ್‌ ಹಂತಕರನ್ನು ಬಂಧಿಸಲು ಸಾಧ್ಯವಾಗಿಲ್ಲ, ತಕ್ಷಣ ಬಂಧಿಸದಿದ್ದಲ್ಲಿ ಕಾಂಗ್ರೇಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

Advertisement
Click to comment

You must be logged in to post a comment Login

Leave a Reply