Connect with us

KARNATAKA

ಪ್ರಿಯಾಂಕ ಖರ್ಗೆ ಗಂಡೋ ಹೆಣ್ಣೋ ಎಂಬ ಬಗ್ಗೆ ಗೊಂದಲವಿದೆ – ಪ್ರತಾಪ್ ಸಿಂಹ

ಮೈಸೂರು ನವೆಂಬರ್ 14: ಬಿಟ್ ಕಾಯಿನ್ ಹಗರಣ ಈಗ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಮೈಸೂರಿನ  ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ ಮರಿ ಖರ್ಗೆ ಅವರ ಹೆಸರಲ್ಲೇ ಅವರು ಗಂಡೋ ಅಥವಾ ಹೆಣ್ಣೋ ಎಂಬ ಗೊಂದಲವಿದೆ ಎಂದು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಹೇಳಿಕೆಗೆ ಮಾತ್ರ ಸೀಮಿತರಾಗಿದ್ದಾರೆ. ಅವರ ಬಳಿ ಯಾವುದೇ ದಾಖಲೆಗಳಿಲ್ಲ ಎಂದರು. ಇನ್ನು, ಪೇಪರ್ ಟೈಗರ್ ಹೇಳಿಕೆಗೆ ಉತ್ತರ ಕೊಡಲ್ಲ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೂ ಪ್ರತಾಪ್ ಸಿಂಹ ತಿರುಗೇಟು ನೀಡಿದರು.


ಪೇಪರ್ ಸಿಂಹ ಅಂದರೆ ನನಗೆ ಯಾವುದೇ ಬೇಸರ ಇಲ್ಲ. ಪ್ರತ್ರಿಕೋದ್ಯಮದ ಮೂಖಾಂತರ ಇಂದು ನಾನು ಮೈಸೂರು ಮತ್ತು ಕೊಡಗಿನಂತಹ ಕಷ್ಟದ ಎರಡು ಕ್ಷೇತ್ರಗಳಲ್ಲಿ ಸಂಸದನಾಗಿದ್ದೇನೆ. ನನ್ನ ಪ್ರಾಮಾಣಿಕ ಬರವಣಿಗೆ ಮೂಲಕ ನಾನು ಇಂದು ಈ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ. ಆದ್ರೆ ನನ್ನನ್ನು ಪೇಪರ್ ಸಿಂಹ ಎಂದು ಹೇಳುತ್ತಿರುವ ಮರಿ ಖರ್ಗೆ ಹೆಸರು ಗಂಡೋ, ಹೆಣ್ಣೋ ಯಾರಿಗೂ ಗೊತ್ತೆ ಆಗುವುದಿಲ್ಲ. ಏಕೆಂದರೆ ಅವರು ರಾಜೀವ್ ಗಾಂಧಿ ಮಗಳ ಹೆಸರು ಇಟ್ಟುಕೊಂಡಿದ್ದಾರೆ. ಹೆಸರಲ್ಲೂ ಕೂಡ ಸ್ವಂತತೆ ಇಲ್ಲ ಎಂದು ಅಣುಕಿಸಿದ್ದಾರೆ

ಬಡವ, ನಿರ್ಗತಿಕ ಶೋಷಿತ ವರ್ಗದವರು ತುಳಿತಕ್ಕೊಳಗದವರು ಅಂತ ಅನಿಸಿಕೊಂಡು ಡಾಲರ್ಸ್ ಕಾಲೋನಿ, ಸದಾ ಶಿವನಗರದಲ್ಲಿ ನಾಲ್ಕು-ನಾಲ್ಕು ಮನೆ ಕಟ್ಟಿಕೊಂಡು, ಕಾಲಿಗೊಂದು, ಕೈಗೊಂದು ಬಿಎಂಡಬ್ಲೂ, ಆಡಿ ಕಾರುಗಳನ್ನು ಇಟ್ಟುಕೊಂಡು ಓಡಾಡುವಂತಹ ವ್ಯಕ್ತಿಗಳ ಬಾಯಿಂದ ಹಳೆಯ ಕಾಲದ ಕುರ್ತಾ ಹಾಕಿಕೊಂಡು ಓಡಾಡುವಂತಹ ನಮ್ಮ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಆರೋಪಗಳನ್ನು ಕೇಳುವಂತಹದು ಅಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದು ಪ್ರಿಯಾಂಕ ಖರ್ಗೆಗೆ ತಿರುಗೇಟು ನೀಡಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *