ಕಾಂಗ್ರೇಸ್ ಸರಕಾರದ ಟಿಪ್ಪು ಜಯಂತಿ ವಿರುದ್ದ ತಮ್ಮ ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ ಡಿಸೆಂಬರ್ 17: ಕಾಂಗ್ರೇಸ್ ಸರಕಾರದ ಟಿಪ್ಪುಜಯಂತಿ ಕಾರ್ಯಕ್ರಮವನ್ನು ಅವರದೇ ಪಕ್ಷದ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟೀಕೆ ಮಾಡಿದ್ದಾರೆ. ಅಲ್ಲದೆ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ತಾವು ಗೈರು ಹಾಜರಾಗಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಪೇತ್ರಿಯ ಚರ್ಚ್ ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇಲ್ಲಿನ ಚರ್ಚ್ ನಿರ್ಮಾಣ ಆಗಿ ಐವತ್ತು ವರ್ಷ ಆಗಿದೆ. ಈ ಹಿಂದಿನ ಚರ್ಚನ್ನು ಟಿಪ್ಪು ಸುಲ್ತಾನ್ ನಾಶ ಮಾಡಿದ್ದ ಎಂದು ಹೇಳಲಾಗಿದ್ದು. ನಮ್ಮ ಹಿಂದಿನ ಸರಕಾರ ಸರಿಯೋ ತಪ್ಪೋ ಟಿಪ್ಪು ಜಯಂತಿಯನ್ನು ಆಚರಿಸಲು ಪ್ರಾರಂಭಿಸಿತು.

ಆದರೆ ನಾನು ಯಾವುದೇ ಟಿಪ್ಪು ಜಯಂತಿಯಲ್ಲೂ ಭಾಗವಹಿಸಿರಲಿಲ್ಲ. ಬಹುಷಃ ಟಿಪ್ಪು ಇಲ್ಲಿನ ಹಳೆಯ ಚರ್ಚನ್ನು ನಾಶ ಮಾಡಿದ ಕಾರಣಕ್ಕೇ ದೇವರು ನನ್ನನ್ನು ಟಿಪ್ಪು ಜಯಂತಿಯಲ್ಲಿ ಭಾಗವಹಿಸದಂತೆ ಮಾಡಿರಬೇಕು ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೇಸ್ ಸರಕಾರ ಜಾರಿಗೆ ತಂದ ಟಿಪ್ಪುಜಯಂತಿ ಕಾರ್ಯಕ್ರಮದ ವಿರುದ್ದ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ಹೇಳಿಕೆ ಈಗ ಜಿಲ್ಲಾ ಕಾಂಗ್ರೆಸಿಗರಿಗೇ ಮುಜುಗರ ತಂದಿದೆ. ಮಾತ್ರವಲ್ಲ ,ಪಕ್ಷದ ಕಾರ್ಯಕರ್ತರೂ ಕೂಡ ಮಾಜಿ ಸಚಿವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಮುಖಂಡ ಪ್ರಮೋದ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಬಿಜೆಪಿ‌ ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

ಪ್ರಮೋದ್ ಮಧ್ವರಾಜ್ ಶಾಸಕರಾಗಿದ್ದಾಗ ಮತ್ತು ಮಂತ್ರಿಯಾಗಿದ್ದಾಗ ಒಂದು ಸಲವೂ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂಬುದು ಗಮನಾರ್ಹ ಸಂಗತಿ.

VIDEO

5 Shares

Facebook Comments

comments