Connect with us

    LATEST NEWS

    ಉಡುಪಿಯಲ್ಲಿ ಬಂಡಾಯ…ಬೆಂಗಳೂರಿನಲ್ಲಿ ಡಿಕೆಶಿ ಜೊತೆ ಪ್ರಮೋದ್ ಮಧ್ವರಾಜ್

    ಉಡುಪಿ ಡಿಸೆಂಬರ್ 3 : ಉಡುಪಿಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೇಸ್ ನ ಸಮಾವೇಶದಲ್ಲಿ ಕಾಣಿಸಿಕೊಳ್ಳದೇ ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೇಸ್ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.


    ಉಡುಪಿ ಕಾಂಗ್ರೇಸ್ ನಲ್ಲಿ ಪ್ರಮೋಧ್ ಮಧ್ವರಾಜ್ ಬೆಂಬಲಿಗರು ಹಾಗೂ ಕಾಂಗ್ರೇಸ್ ನ ಇತರ ಮುಖಂಡರೊಂದಿಗೆ ನಡೆಯುತ್ತಿರುವ ಒಳಜಗಳಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದಾರೆ. ಈ ಮೂಲಕ ಮೊನ್ನೆ ಸಮಾವೇಶದಲ್ಲಿ ಭಾಗವಹಿಸದೇ ಹೊರಗೆ ಉಳಿದಿದ್ದ ಪ್ರಮೋದ್ ಮಧ್ವರಾಜ್ ಡಿಕೆಶಿ ಭೇಟಿ ಮೂಲಕ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.


    ಈಗಾಗಲೇ ಉಡುಪಿಯಲ್ಲಿ ತಾರಕಕ್ಕೇರಿರುವ ಕಾಂಗ್ರೇಸ್ ನ ಒಳಜಗಳ ಮೊನ್ನೆ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶದಲ್ಲೂ ಕಾಣಿಸಿಕೊಂಡಿತ್ತು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗವಹಿಸಿದ್ದ ಸಮಾವೇಶದಲ್ಲಿ ಹೊರಗಡೆ ಪ್ರಮೋದ್ ಮಧ್ವರಾಜ್ ಬೆಂಬಲಿಗರು ಮೌನ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಮಧ್ವರಾಜ್ ಸಮಾವೇಶಕ್ಕೆ ಆಗಮಿಸದೇ ದೂರ ಉಳಿದಿದ್ದರು. ಈ ಹಿನ್ನಲೆ ಸಮಾವೇಶದಲ್ಲಿ ಮಾತನಾಡಿದ್ದ ಡಿಕೆಶಿ ಮನೆಯ ಚೌಕಟ್ಟಿಲ್ಲಿ ಭಿನ್ನಾಭಿಪ್ರಾಯ ಇರುತ್ತದೆ ನಿಜ. ನನ್ನಿಂದಲೇ ಪಕ್ಷ ಅಂತ ಬ್ಲಾಕ್ ಮೇಲ್ ಮಾಡಬಾರದು. ಆ ರೀತಿ ಬ್ಲಾಕ್‌ಮೇಲ್ ಮಾಡಬಹುದು ಅಂತ ಭಾವಿಸಿದರೆ ಅದು ಭ್ರಮೆ. ಯಾರಾದರೂ ಪಕ್ಷ ಬಿಟ್ಟು ಹೋಗುವವರಿದ್ದರೆ ಕಳುಸಿಕೊಡೋಣ. ಅವರನ್ನು ಗೌರವಯುತವಾಗಿ ಕಳುಹಿಸಿಕೊಡೋಣ ಎಂದರು.
    ಈಗ ಪ್ರಮೋದ್ ಮಧ್ವರಾಜ್ ಅವರ ಡಿಕೆಶಿ ಭೇಟಿ .. ಉಡುಪಿಯ ಕಾಂಗ್ರೇಸ್ ನ ಒಳಜಗಳ ಶಮನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply