LATEST NEWS
ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ವಶ
ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ವಶ
ಉಡುಪಿ ಮಾರ್ಚ್ 28: ಸಚಿವ ಪ್ರಮೋದ್ ಮಧ್ವರಾಜ್ ಅವರ ಚುನಾವಣಾ ಪ್ರಚಾರ ವಾಹನವನ್ನು ಚುನಾವಣಾ ಆಯೋಗ ಸೀಜ್ ಮಾಡಿದ ಘಟನೆ ನಡೆದಿದೆ.
ಪ್ರೊಪೆಶನರಿ ಐಎಎಸ್ ಅಧಿಕಾರಿ ಪೂವಿತಾ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಚುನಾವಣಾ ಆಯೋಗ ಉಡುಪಿಯ ಪ್ರವಾಸಿ ಬಂಗಲೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಪ್ರಮೋದ್ ಮಧ್ವರಾಜ್ ಅವರ ಪ್ರಚಾರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಚುನಾವಣಾ ಆಯೋಗದ ಪರವಾನಿಗೆ ಪಡೆಯದೆ ವಾಹನವನ್ನು ಪ್ರಚಾರಕ್ಕೆ ಬಳಸಲಾಗಿತ್ತು ಎಂದು ಆರೋಪಿಸಲಾಗಿದ್ದು, ಕೈ ಚಿಹ್ನೆ, ಪ್ರಮೋದ್ ಭಾವಚಿತ್ರ ಇದ್ದ ವಾಹನ ಇದಾಗಿದ್ದು, ಈ ಹಿನ್ನಲೆಯಲ್ಲಿ ವಾಹನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಭಾರಿ ವಿವಾದಕ್ಕೀಡಾಗಿದ್ದ ಪ್ರಮೋದ್ ಮಧ್ವರಾಜ್ ಅವರ ಪ್ರಚಾರ ವಾಹನ ಇದಾಗಿದ್ದು, ಈ ಮೊದಲು ವಾಹನದಲ್ಲಿ ಪಕ್ಷದ ಚಿಹ್ನೆ ಬಳಸದೇ ಇದ್ದದರಿಂದ ಕಾಂಗ್ರೇಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು, ನಂತರ ಎರಡು ದಿನಗಳ ಹಿಂದೆಯಷ್ಟೇ ವಾಹನದಲ್ಲಿ ಕಾಂಗ್ರೇಸ್ ಪಕ್ಷದ ಕೈ ಚಿಹ್ನೆಯನ್ನು ಹಾಕಿಸಿದ್ದರು. ಈಗ ಚುನಾವಣಾ ಆಯೋಗ ವಾಹನವನ್ನು ಸೀಜ್ ಮಾಡಿದೆ.
You must be logged in to post a comment Login