LATEST NEWS
ಬಿಜೆಪಿ ಸೇರ್ಪಡೆ ಬಗ್ಗೆ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದ ಪ್ರಮೋದ್ ಮಧ್ವರಾಜ್
ಬಿಜೆಪಿ ಸೇರ್ಪಡೆ ಬಗ್ಗೆ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದ ಪ್ರಮೋದ್ ಮಧ್ವರಾಜ್
ಉಡುಪಿ ಮಾರ್ಚ್ 28: ಬಿಜೆಪಿ ಸೇರ್ಪಡೆಯನ್ನು ಅಲ್ಲಗೆಳೆಯುತ್ತಾ ಬಂದಿರುವ ಸಚಿವ ಪ್ರಮೋದ್ ಮಧ್ವರಾಜ್ ಕೊನೆಗೂ ಮೊದಲ ಬಾರಿ ಬಹಿರಂಗವಾಗಿಯೇ ಟ್ವಿಟ್ ಮಾಡಿದ್ದಾರೆ.
ಮಧ್ವರಾಜ್ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಬಗ್ಗೆ ಕಳೆದ ಹಲವು ದಿನಗಳಿಂದ ಭಾರೀ ಚರ್ಚೆಗೆ ನಡೆಯುತ್ತಿತ್ತು. ಈ ನಡುವೆ ಮಧ್ವರಾಜ್ ಕೂಡ ಬಿಜೆಪಿ ಸೇರಲ್ಲ ಎಂದು ಮಾಧ್ಯಮಗಳ ಸ್ಪಷ್ಟನೆ ನೀಡಿದ್ದರು, ಆದರೆ ಕೆಲ ದಿನಗಳ ಹಿಂದೆ ಬಿಜೆಪಿ ಗೇಟು ಮುಚ್ಚಿದೆ.
ಗೇಟು ಮುಚ್ಚಿರೋದ್ರಿಂದ ಹೋಗೋ ಪರಿಸ್ಥಿತಿ ಬರಲ್ಲ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟವರಂತೆ ಮಾತಾಡಿದ್ದರು. ಇಂದು ದೆಹಲಿಯಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿರುವ ಸುದ್ದಿಯೂ ಹರಡಿದ್ದು ಇದಕ್ಕೆ ಪ್ರಮೋದ್ ಕೂಡ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಅದೆಷ್ಟೋ ಬಾರಿ ಹೇಳಿದ್ದೇನೆ ನಾನು ಯಾವ ಪಕ್ಷಕ್ಕೂ ಸೇರಲ್ಲ ಎಂದು ಈಗಲೂ ಹೇಳುತ್ತೇನೆ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
You must be logged in to post a comment Login