Connect with us

    LATEST NEWS

    ಮಂಗಳೂರಿನಲ್ಲೀಗ Selfie with potholes ಕ್ರೇಜ್…..!

    ಮಂಗಳೂರಿನಲ್ಲೀಗ Selfie with potholes ಕ್ರೇಜ್…..!

    ಮಂಗಳೂರು ನವೆಂಬರ್ 2: ಮಂಗಳೂರು ನಗರದ ರಸ್ತೆಗಳಲ್ಲಿ ಈಗ ಗುಂಡಿಗಳದ್ದೇ ಕಾರುಬಾರು.., ನಗರದ ಯಾವುದೇ ರಸ್ತೆಯಲ್ಲಿ ಸಂಚರಿಸಬೇಕಾದರೂ ವಾಹನ ಸವಾರರೂ ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ರಾಜಕಾರಣಿಗಳಿಗೆ ಸಾರ್ವಜನಿಕರ ಸಮಸ್ಯೆ ತಿಳಿಯದೇ ಚುನಾವಣೆಯ ಗುಂಗಿನಲ್ಲೇ ಇದ್ದಾರೆ. ನಿದ್ರೆಯಲ್ಲಿರುವ ಜನಪ್ರತಿನಿಧಿಗಳನ್ನು ಕಣ್ತೇರೆಸುವ ಸಲುವಾಗಿ ಎಂಸಿಸಿ ಸಿವಿಕ್ ಗ್ರೂಪ್ ಎಂಬ ಪರಿಸರ ಪ್ರೇಮಿ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಅಭಿಯಾನ ಆರಂಭಿಸಿದೆ.

    ಮಂಗಳೂರಿನಲ್ಲಿರುವ ರಸ್ತೆ ಗುಂಡಿ ಮುಚ್ಚುವಂತೆ ಸೆಲ್ಫಿ ಸಮರ ಸಾರಿರುವ ಈ ತಂಡ “Selfie with potholes” ಎಂಬ ವಿಶೇಷ ಕಾರ್ಯಕ್ರಮ ಮಾಡುತ್ತಿದೆ. ಎಂಸಿಸಿ ಸಿವಿಕ್ ಗ್ರೂಪ್ ನಗರದ ಮಾರ್ಕೆಟ್ ರಸ್ತೆಯಲ್ಲಿ ರಸ್ತೆ ಗುಂಡಿ ಜೊತೆಗೆ ಸೆಲ್ಪೆ ತೆಗೆದು ಅದನ್ನು ಸಂಬಂಧಿಸಿದವರಿಗೆ ಟ್ಯಾಗ್ ಮಾಡುವ ಅಭಿಯಾನ ಕೈಗೊಂಡಿತ್ತು. ರಸ್ತೆ ಗುಂಡಿಯಲ್ಲ ಇದು ಇಂಗು ಗುಂಡಿ ಎನ್ನು ಫಲಕಗಳನ್ನು ಗುಂಡಿ ಪಕ್ಕ ಇಟ್ಟು ವ್ಯಂಗದ ಮೂಲಕ ತನ್ನ ಆಕ್ರೋಶ ಹೊರ ಹಾಕಿದ್ದಾರೆ.. ಒಟ್ಟಿನಲ್ಲಿ ರಸ್ತೆ ಗುಂಡಿಗಳ ವಿರುದ್ಧ ಈ ವಿನೂತನ ಪ್ರತಿಭಟನೆಗೆ ಜನರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply