ಉಗ್ರರ ದಾಳಿ ಸಾಧ್ಯತೆ ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ

ಮಂಗಳೂರು ಅಗಸ್ಟ್ 16 : ಬೆಂಗಳೂರಿನಲ್ಲಿ ಉಗ್ರರ ದಾಳಿ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಹೈ ಅಲರ್ಟ್ ಘೋಷಣೆ ಮಾಡಿದ್ದು, ಕರಾವಳಿ ನಗರ ಮಂಗಳೂರಿನಲ್ಲೂ ಉಗ್ರರ ದಾಳಿ ಸಾಧ್ಯತೆ ಹಿನ್ನಲೆಯಲ್ಲಿ ನಗರದಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ.

ಕರ್ನಾಟಕದ ಕಡಲ ತೀರ ಮಂಗಳೂರಿನಲ್ಲೂ ಉಗ್ರರ ದಾಳಿ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಮಂಗಳೂರಿನಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರಿನ ಪ್ರಮುಖ ಸ್ಥಳ, ಇನ್ಫೋಸಿಸ್, ಆಸ್ಪತ್ರೆ, ಸೇರಿದಂತೆ ವಿವಿಧೆಡೆ ಪೊಲೀಸರ ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಾಂಬ್ ಸ್ಕಾಡ್, ಡಾಗ್ ಸ್ಕಾಡ್ ನಿಂದ ಪರಿಶೀಲನೆ ನಡೆಸುತ್ತಿದ್ದಾರೆ.

ಅಲ್ಲದೆ ಮೀನುಗಾರರಿಗೂ ಜಿಲ್ಲಾಡಳಿತ ಈಗಗಾಲೇ ಸೂಚನೆ ನೀಡಿದ್ದು, ಸಮುದ್ರದಲ್ಲಿ ಅನುಮಾನಾಸ್ಪದ ಬೋಟ್ ಬಂದರೆ ತಿಳಿಸಲು ಸೂಚನೆ ನೀಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂದರು, ಏರ್ ಪೋರ್ಟ್, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ ನಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

Facebook Comments

comments