ಕೊಪ್ಪಳ ನವೆಂಬರ್ 06: ಸ್ವಂತ ಅಣ್ಣನೇ ತನ್ನ ತಂಗಿಯನ್ನು ಗರ್ಭಿಣಿ ಮಾಡಿ ಮಗು ಕರುಣಿಸಿದ ಘಟನೆ ಕೊಪ್ಪಳ ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇತ್ತೀಚೆಗೆ ಅಪ್ರಾಪ್ತ ಬಾಲಕಿಗೆ ಹೊಟ್ಟೆನೋವು ಬಂದ ಕಾರಣ ಆಸ್ಪತ್ರೆಗೆ ತೆರಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ.


ಮನೆಯಲ್ಲಿ ಪೋಷಕರು ಯಾರೂ ಇಲ್ಲದ ಸಮಯ ನೋಡಿಕೊಂಡು ಆರೋಪಿ ಅಣ್ಣ, ತನ್ನ ಅಪ್ರಾಪ್ತ ತಂಗಿಯ ಬಳಿ, “ನಾನು ನಿನ್ನನ್ನೇ ಮದುವೆಯಾಗುತ್ತೇನೆ. ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನಗೆ ಯಾರೂ ಏನೂ ಹೇಳದಂತೆ ಕಾವಲಾಗಿರುತ್ತೇನೆ ಎಂದು ತಂಗಿಗೆ ಒಮ್ಮೆ ಪರಿ ಪರಿ ಬೇಡಿಕೊಂಡನಂತೆ. ಇದಕ್ಕೆ ತಂಗಿ ಆಕ್ಷೇಪ ವ್ಯಕ್ತಪಡಿಸಿ, ಸಮಾಜ ಇಂತಹ ಸಂಬಂಧವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಳಂತೆ ಆಕೆಯ ಮಾತನ್ನು ಕಡೆಗಣಿಸಿದ ಆರೋಪಿ, ಫೆಬ್ರವರಿ ತಿಂಗಳಿನಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪದೇ ಪದೇ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾಗಿ ಸಂತ್ರಸ್ತೆ ತಂಗಿ ಹೇಳಿಕೊಂಡಿದ್ದಾಳೆ.
ಈ ವಿಷಯವನ್ನು ಮನೆಯವರಿಗೆ ತಿಳಿಸಿದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನಂತೆ. ಅಣ್ಣನ ಬೆದರಿಕೆಗೆ ಹೆದರಿದ್ದ ಅಪ್ರಾಪ್ತೆ ಯಾರ ಬಳಿಯೂ ನೋವು ಹೇಳಿಕೊಳ್ಳಲಾಗದೆ ಮೌನಿಯಾಗಿ ಕಾಲದೂಡಿದ್ದಳು ಅಕ್ಟೋಬರ್ 26 ರಂದು ಮನೆಯಲ್ಲಿ ಕೆಲಸ ಮಾಡುವಾಗ ಸಂತ್ರಸ್ತೆ ಜಾರಿ ಬಿದ್ದಿದ್ದಳು. ಆಕೆಯ ಸೊಂಟಕ್ಕೆ ಪೆಟ್ಟಾಗಿತ್ತು. ಆರೋಪಿಯೇ ಆಕೆಯನ್ನು ಊರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿನ ವೈದ್ಯರು, ಬೆನ್ನಿಗೆ ಪೆಟ್ಟಾಗಿರುವುದರಿಂದ ತಕ್ಷಣ ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರು ನಿರ್ದೇಶಿಸಿದ್ದರು.

ಈ ವೇಳೆ ಬಾಲಕಿ ಗರ್ಭಿಣಿಯಾಗಿರುವುದು ಕಂಡು ಬಂದಿದೆ. ಅಲ್ಲದೆ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮವನ್ನು ನೀಡಿದ್ದಾಳೆ. ಈ ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೊಳಗಾದ ವೈದ್ಯರು ಮತ್ತು ಕುಟುಂಬಸ್ಥರು ಬಾಲಕಿಯನ್ನು ವಿಚಾರಿಸಿದಾಗ, ಸ್ವಂತ ಅಣ್ಣನೇ ತನ್ನ ಮೇಲೆ ದೌರ್ಜನ್ಯ ಎಸಗಿರುವುದಾಗಿ ಆಕೆ ನೋವಿನಿಂದ ಹೇಳಿಕೊಂಡಿದ್ದಾಳೆ. ಬಾಲಕಿ ನೀಡಿದ ಹೇಳಿಕೆಯನ್ನು ಆಧರಿಸಿ, ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಅಣ್ಣನ ವಿರುದ್ಧ ದೂರು ದಾಖಲಿಸಲಾಗಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ಅಣ್ಣನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Share Information