ಪುತ್ತೂರು ಫೆಬ್ರವರಿ 10: ಕಾಡಿನಲ್ಲಿರಬೇಕಾದ ಮುಳ್ಳುಹಂದಿಯೊಂದು ಪುತ್ತೂರು ನಗರದ ಮಧ್ಯೆ ಪ್ರತ್ತಕ್ಷಗೊಂಡು ಕುತೂಹಲ ಸೃಷ್ಠಿಸಿದ ಘಟನೆ ನಡೆದಿದೆ.

ಪುತ್ತೂರು ಬ್ಲಡ್ ಬ್ಯಾಂಕ್ ಬಳಿ ಮುಳ್ಳುಹಂದಿ ಪತ್ತೆಯಾಗಿದ್ದು, ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮುಳ್ಳು ಹಂದಿ ಗಾಯಗೊಂಡಿದ್ದು, ಜನವಸತಿ ಪ್ರದೇಶದೊಳಗೆ ನುಗ್ಗಿ ಆತಂಕ ಸೃಷ್ಠಿಸಿತ್ತು.

ಸ್ಥಳಕ್ಕೆ ಸ್ನೇಕ್ ತೇಜಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಮುಳ್ಳುಹಂದಿಯ ರಕ್ಷಣೆ ಮಾಡಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಉಲ್ಲಾಸ್ ಅವರು ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದರು.