MANGALORE
ಎಮ್ಆರ್ ಪಿಎಲ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಪೊರಕೆ ಮೆರವಣಿಗೆ
ಎಮ್ಆರ್ ಪಿಎಲ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಪೊರಕೆ ಮೆರವಣಿಗೆ
ಮಂಗಳೂರು ಜನವರಿ 7: ಎಮ್ಆರ್ ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಉಂಟಾದ ಕೆಮಿಕಲ್ ಮಾಲಿನ್ಯದ ಸಮಸ್ಯೆಗಳ ವಿರುದ್ದ ಜೋಕಟ್ಟೆ, ಕಳವಾರು, ತೋಕೂರು ಗ್ರಾಮಸ್ಥರು ವರ್ಷಗಳ ಕಾಲ ನಡೆಸಿದ ಹೋರಾಟದ ಪರಿಣಾಮವಾಗಿ ಸರಕಾರ ಹೊರಡಿಸಿದ ಆರು ಅಂಶಗಳ ಪರಿಹಾರ ಕ್ರಮದ ಆದೇಶವನ್ನು ಎಮ್ಆರ್ ಪಿಎಲ್ ಜಾರಿಗೆ ತರದೆ ವಂಚಿಸಿದೆ ಎಂದು ಆರೋಪಿಸಲಾಗಿದೆ.
ಜಿಲ್ಲಾಡಳಿತವೂ ಕಂಪೆನಿಯ ಜೊತೆ ಶಾಮೀಲಾಗಿ ಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ “ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ” ಜನವರಿ 10 ರಂದು ಬೆಳಿಗ್ಗೆ 10: 30 ಕ್ಕೆ ಮಿನಿ ವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಪೊರಕೆ ಮೆರವಣಿಗೆ, ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮಾರಕ ಮಾಲಿನ್ಯದಿಂದ ಕಂಗೆಟ್ಟಿರುವ ಸ್ಥಳೀಯರು ಮತ್ತೊಮ್ಮೆ ತೀವ್ರತರದ ಹೋರಾಟಕ್ಕೆ ಮುಂದಾಗಿದ್ದು, ಕಂಪೆನಿಯ ವಂಚನೆ, ಜಿಲ್ಲಾಡಳಿತದ ಕಂಪೆನಿ ಪರ ನಿಲುವುಗಳನ್ನು ವಿರೋಧಿಸಿ, ಸರಕಾರದ ಆದೇಶ ತಕ್ಷಣ ಜಾರಿಗೆ ತರಬೇಕು, ಮಾಲಿನ್ಯಕಾರಕ, ವಂಚಕ ಕಂಪೆನಿ ಎಮ್ ಆರ್ ಪಿ ಎಲ್ ಅನ್ನು ಸಾವಿರ ಎಕರೆ ಕೃಷಿ ಭೂಮಿಯಲ್ಲಿ ವಿಸ್ತರಿಸುವ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ ಪೊರಕೆ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
Facebook Comments
You may like
ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಉಡುಪಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ
ಚಲಿಸುತ್ತಿದ್ದ ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಆರೋಪಿಯ ಬಂಧನ
ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದ ಮಂಗಳೂರು ಸರ್ವೇಯರ್!
ಸಾಸ್ತಾನ ನವಯುಗ ಟೋಲ್ ಗೇಟ್ ವಿರುದ್ದ ಸ್ಥಳೀಯರ ಬೃಹತ್ ಪ್ರತಿಭಟನಾ ಸಭೆ
ಮಂಗಳೂರಿಗೆ ಯೋಗಿ ಆದಿತ್ಯನಾಥ; ಪೇಜಾವರ ಶ್ರೀಗಳ ಭೇಟಿ
ಟಾಪ್ ಲೆಸ್ ಪೋಟೋ ದಲ್ಲಿ ಗಣೇಶ ವಿಗ್ರಹ..ಪಾಪ್ ಸಿಂಗರ್ ರಿಹಾನ್ ವಿರುದ್ದ ಆಕ್ರೋಶ
You must be logged in to post a comment Login