Connect with us

FILM

ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ

ಮುಂಬೈ : ಒಂದೆಡೆ ಮಳೆಯಿಂದಾಗಿ ಕ್ರಿಕೆಟ್ ಮ್ಯಾಚ್ ನಡೆಯುವುದೇ ಕಷ್ಟವಾಗಿದ್ದರೇ, ಇನ್ನೊಂದೆಡೆ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದರೆ ನಾನು ಬೆತ್ತಲಾಗುವುದಾಗಿ ಮಾಡೆಲ್ ನಟಿ ಪೂನಂ ಪಾಂಡೆ ಕೊಹ್ಲಿ ಪಡೆಗೆ ಬಿಗ್ ಆಫರ್ ನೀಡಿದ್ದಾರೆ.


ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ನ ಪಟ್ಟಕ್ಕಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯುತ್ತಿದೆ. ಈ ನಡುವೆ ಮಾಡೆಲ್ ಪೂನಂ ಪಾಂಡೆ ಭಾರತ ತಂಡಕ್ಕೆ ಹೊಸ ಆಫರ್ ನೀಡಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಪೂನಂ ಪಾಂಡೆ, ಕ್ರಿಕೆಟ್ ಚಾಲು ಹೈ, ಲೋಗ್ ಕ್ರಿಕೆಟ್ ಖೇಲ್ ರಹೇ ಹೈ. ಈ ಬಾರಿ ಮತ್ತೆ ಹೇಳುತ್ತಿದ್ದೇನೆ ಭಾರತ ತಂಡ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್ ಗೆದ್ದರೆ ಮತ್ತೆ ಬೆತ್ತಲಾಗಿ ವಿವಾದ ಎದುರಿಸಲು ಸಿದ್ಧ ಎಂದಿದ್ದಾರೆ.


2011ರಲ್ಲಿ ಈ ರೀತಿ ಭಾರತ ತಂಡಕ್ಕೆ ಆಫರ್ ನೀಡಿ ಬಳಿಕ ಪೂನಂ ಪಾಂಡೆ ತನ್ನ ಕೆಲವು ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. ಇದೀಗ ಮತ್ತೆ ಬೆತ್ತಲಾಗುದಾಗಿ ಹೇಳಿ ಪಡ್ಡೆ ಹುಡುಗರಿಗೆ ಮೈ ಬಿಸಿಯಾಗುವಂತೆ ಮಾಡಿದ್ದಾರೆ.