Connect with us

MANGALORE

ಕರಾವಳಿ ಭಾಗದ ಪ್ರಭಾವಿ ಕಾಂಗ್ರೆಸ್ ರಾಜಕಾರಣಿ.. ಮಾಜಿ ಕೇಂದ್ರ ಸಚಿವರಿಗೂ ತಗುಲಿದ ಕೊರೋನಾ……!!

ಮಂಗಳೂರು ಜುಲೈ 5: ಕರಾವಳಿ ಭಾಗದ ಪ್ರಭಾವಿ ಕಾಂಗ್ರೆಸ್ ರಾಜಕಾರಣಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಕೇಂದ್ರ ಮಾಜಿ ಸಚಿವ ಬಿ. ಜನಾರ್ಧನ  ಪೂಜಾರಿಯವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕು ವ್ಯಾಪಕವಾಗಿ ಹರಡುತ್ತಿದ್ದು, ಸದಾ ಮನೆಯಲ್ಲೇ ಇರುವ ಹಿರಿಯ ರಾಜಕಾರಣಿ ಪೂಜಾರಿಯವರ ಮನೆಗೂ ತಲುಪಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.


ಇಂದಿರಾಗಾಂಧಿ ಕಾಲದಿಂದಲೇ ಕೇಂದ್ರದಲ್ಲಿ ಪ್ರಭಾವಿ ರಾಜಕಾರಣಿಯಾಗಿ ದುಡಿದಿರುವ ಇವರು ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಕೊಡುಗೆ ನೀಡಿದವರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರಿಗೆ ಇಲ್ಲಿಯವರೆಗೆ ಕೊರೊನಾದ ಯಾವುದೇ ಸೋಂಕು ಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಎಂದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜನಾರ್ದನ ಪೂಜಾರಿ ಹಿರಿಯ ಪುತ್ರ ಸಂತೋಷ್ ಜೆ. ಪೂಜಾರಿ, ‘ಪ್ರಸಕ್ತ ಜನಾರ್ದನ ಪೂಜಾರಿ ಆರೋಗ್ಯವಾಗಿದ್ದು, ಯಾರೂ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಆರಂಭದಲ್ಲಿ ಪೂಜಾರಿ ಅವರ ಸೊಸೆ ಮೂಲಕ ಮನೆಗೆ ಪ್ರವೇಶಿಸಿದ ಸೋಂಕು ಬಳಿಕ ಅವರ ಪತ್ನಿಗೆ ಬಂದಿತ್ತು. ಅವರು ಗುಣಮುಖರಾಗುತ್ತಿದ್ದು, ಇವರು ಕೂಡಾ ಶೀಘ್ರದಲ್ಲೇ ಗುಣಮುಖರಾಗಲು ನಾವೆಲ್ಲರೂ ಪ್ರಾರ್ಥಿಸೋಣ’ ಎಂದು ತಿಳಿಸಿದ್ದಾರೆ