Connect with us

LATEST NEWS

ಕೊರೊನಾ ಲಸಿಕೆ ವಿಚಾರದಲ್ಲೂ ಅಪಪ್ರಚಾರ ಮಾಡುತ್ತಿರುವುದು ದುರ್ದೈವ ಸಂಗತಿ

ಉಡುಪಿ ಜನವರಿ 12: ದೇಶದಲ್ಲಿ ತಯಾರಾದ ಕೊರೊನಾ ಲಸಿಕೆ ವಿರುದ್ದ ಅಪಪ್ರಚಾರ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದ್ದು, ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.


ನಗರದಲ್ಲಿ ಮಂಗಳವಾರ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರು ಕೋವಿಡ್ ಲಸಿಕೆ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆದರೆ, ಕೆಲವು ಪಕ್ಷಗಳಿಗೆ ವಿಶ್ವಾಸವಿಲ್ಲ. ಅಂಥವರನ್ನು ಜನರು ದೇಶದ ರಾಜಕಾರಣದಿಂದ ಅಳಿಸಿ ಹಾಕಲಿದ್ದಾರೆ. ದೇಶದಲ್ಲಿ ಲಸಿಕೆ ತಯಾರಾದರೆ ಅವರಿಗೆ ನಂಬಿಕೆ ಬರುತ್ತಿಲ್ಲ. ದೇಶದ ವಿಜ್ಞಾನಿಗಳ ಮೇಲೆಯೂ ವಿಶ್ವಾಸವಿಲ್ಲ. ಲಸಿಕೆ ಇಟಲಿಯಿಂದ ಬಂದಿದ್ದರೆ, ಉತ್ತಮ ಲಸಿಕೆ ಎಂದು ಪ್ರಮಾಣಪತ್ರ ಕೊಡುತ್ತಿದ್ದರು ಎಂದು ಪಕ್ಷದ ಹೆಸರೇಳದೆ ವಾಗ್ದಾಳಿ ನಡೆಸಿದರು.

Facebook Comments

comments