ಡ್ರಗ್ಸ್ ಮಾಫಿಯಾ ವಿರುದ್ದ ಪೊಲೀಸ್ ಕಮಿಷನರ್ ವಾರ್ ಇಲ್ಲಿವರೆಗೆ ಜೈಲಿಗೆ ಹೋಗಿದ್ದು 73 ಮಂದಿ

ಮಂಗಳೂರು ನ.8: ಮಂಗಳೂರು ನಗರ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಪಂಜಿಮೋಗರು ನಿವಾಸಿ ಮೊಹಮ್ಮದ ಅಶೀರ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯು ಪಂಜಿಮೊಗರುವಿನ ರಾಘವೇಂದ್ರ ಮಠದ ರಸ್ತೆಯ ಬದಿಯ ಮೈದಾನದಲ್ಲಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 6500ರೂಪಾಯಿ ಮೌಲ್ಯದ 350 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಇದುವರೆಗೂ ಮಂಗಳೂರು ಪೊಲೀಸರು ಡ್ರಗ್ಸ್ ಮಾಫಿಯಾ ಪ್ರಕರಣ ವಿರುದ್ಧ ಸಮರ ಸಾರಿದ್ದು 73 ಬಂಧಿಸಿ ಜೈಲಿಗಟಿದ್ದಾರೆ.