ಮಂಗಳೂರಿನಲ್ಲಿ ಅಲ್ಪಾವಧಿ ಪೋಲೀಸ್ ಅಧಿಕಾರಿಗೆ ಮಾತ್ರ ವರ್ಗ, ದೀರ್ಘಾವಧಿ ಅಧಿಕಾರಿಗಳಿಗೆ ಇಲ್ಲಿ ಸ್ವರ್ಗ...

ಮಂಗಳೂರು, ಡಿಸೆಂಬರ್ 5. ರಾಜ್ಯದ ಎಲ್ಲಾ ಪೋಲೀಸ್ ಕಮಿಷನರೇಟ್ ವ್ಯಾಪ್ತಿಯ ಪೋಲೀಸ್ ಠಾಣೆಗಳಲ್ಲಿ ದೀರ್ಘಾವಧಿ ಕಾಲದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲೀಸ್ ಅಧಿಕಾರಿಗಳ ವರ್ಗಾವಣೆಯ ಆದೇಶ ಹೊರ ಬಿದ್ದಿದೆ.

ಆದರೆ ಮಂಗಳೂರು ಪೋಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾತ್ರ ದೀರ್ಘಾವಧಿಯಿಂದ ತಮ್ಮ ಖರ್ಚಿಯಲ್ಲೇ ಅಂಟಿಕೊಳ್ಳುವ ಸೌಭಾಗ್ಯ ದೊರೆತಿದೆ.

ಆದರೆ ವರ್ಷದ ಹಿಂದೆ ಪ್ರೋಬೆಷನರಿ ಸಬ್ ಇನ್ಸ್ ಪೆಕ್ಟರ್ ಆಗಿ ನಿಯುಕ್ತಿಗೊಂಡ ರವಿ ಪವಾರ್ ಎನ್ನುವ ಪ್ರಾಮಾಣಿಕ ಅಧಿಕಾರಿಗೆ ಮಾತ್ರ ಇಲ್ಲಿ ವರ್ಗಾವಣೆಯ ಆದೇಶವಾಗಿದೆ.

ರವಿ ಪವಾರ್ ಅವರು ಕೊಣಾಜೆ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಪ್ರಯತ್ನಿಸಿದ್ದರು.

ಕೊಣಾಜೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ಕಡಿವಾಣ ಹಾಕಿರುವುದೂ ರವಿ ಪವಾರ್ ಗೆ ಮುಳುವಾಯಿತು ಎನ್ನುವ ಮಾತುಗಳೂ ಕೇಳಿ ಬರುತ್ತಿದೆ.

ಈ ನಡುವೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮುಸ್ಲಿಂ ಸಂಘಟನೆಯೊಂದರ ಧ್ವಜಕ್ಕೆ ಅರಿವಿಗೆ ಬಾರದೆ ತುಳಿದಿದ್ದ ವಿಚಾರವಾಗಿ ಪವಾರ್ ಅವರನ್ನು ಕೊಣಾಜೆ ಠಾಣೆಯಿಂದ ಕಮಿಷನರ್ ಕಛೇರಿಗೆ ವರ್ಗಾಯಿಸಲಾಗಿತ್ತು ಎನ್ನಲಾಗಿದೆ.

ತಿಂಗಳ ಕಾಲ ಕೇವಲ ಕಮಿಷನರ್ ಕಛೇರಿಗೆ ಬಂದು ಹೋಗುವ ಕೆಲಸವನ್ನಷ್ಟೇ ಈ ಪ್ರಾಮಾಣಿಕ ಅಧಿಕಾರಿಗೆ ನೀಡಲಾಗಿತ್ತು ಎನ್ನುವ ವಿಚಾರ ಇದೀಗ ಪೋಲೀಸ್ ವಲಯದಲ್ಲೇ ಹರಿದಾಡುತ್ತಿದೆ.

ಧ್ವಜಕ್ಕೆ ತುಳಿದ ವಿಚಾರವನ್ನು ಸಂಘಟನೆಯ ಪ್ರಮುಖರು ಜಿಲ್ಲೆಯ ಉಸ್ತುವಾರಿ ಸಚಿವರ ಗಮನಕ್ಕೆ ತಂದ ಹಿನ್ನಲೆಯಲ್ಲಿ ಸಂಘಟನೆಯನ್ನು ಅತಿಯಾಗಿ ಪ್ರೀತಿಸುವ ಸಚಿವರು ತಕ್ಷಣ ಪೋಲೀಸ್ ಕಮಿಷನರ್ ಗೆ ವಿಚಾರ ತಿಳಿಸಿದ ಹಿನ್ನಲೆಯಲ್ಲಿ ಪವಾರ್ ಅವರನ್ನು ಕೊಣಾಜೆ ಠಾಣೆಯಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು ಎನ್ನಲಾಗಿದೆ.

ಸೇವೆಗೆ ಸೇರಿ ಕೇವಲ ಒಂದು ವರ್ಷ ಕಳೆಯುವದರ ಒಳಗಾಗಿ ಪವಾರ್ ರಂಥಹ ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾವಣೆ ಮಾಡುವ ಕಮಿಷನರ್ ಅವರಿಗೆ ತಮ್ಮ ವ್ಯಾಪ್ತಿಯ ಪೋಲೀಸ್ ಠಾಣೆಗಳಲ್ಲಿ ಏಳೆಂಟು ವರ್ಷಗಳಿಂದ ಝಂಡಾ ಹೂಡಿರುವ ಅಧಿಕಾರಿಗಳ ಹೆಸರು ಸಿಗಲಿಲ್ಲವೇ ಎನ್ನುವ ಪ್ರಶ್ನೆ ಮೂಡಲಾರಂಭಿಸಿದೆ.

Facebook Comments

comments