DAKSHINA KANNADA
ರಾಜ್ಯದಲ್ಲಿ ತೀವ್ರಗೊಂಡ ಹಿಜಾಬ್ ವಿವಾದ, ಪುತ್ತೂರಿನಲ್ಲಿ ಪೋಲೀಸ್ ರೂಟ್ ಮಾರ್ಚ್..

ಮಂಗಳೂರು ಫೆಬ್ರವರಿ 11: ಹಿಜಾಬ್-ಕೇಸರಿ ವಿವಾದದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಧೈರ್ಯ ಮೂಡಿಸಲು ಪೊಲೀಸರು ರಾಜ್ಯದಾದ್ಯಂತ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು, ಹೋಬಳಿಗಳಲ್ಲಿ ಶುಕ್ರವಾರ ಪಥ ಸಂಚಲನ ನಡೆಸಿದರು.
ಪೋಲೀಸ್ ಇಲಾಖೆ ಇದೀಗ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ರೂಟ್ ಮಾರ್ಚ್ ನಡೆಸುತ್ತಿದೆ. ಪುತ್ತೂರು ನಗರದಲ್ಲಿ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಯಿತು.
ಪುತ್ತೂರಿನ ದರ್ಬೆ ವೃತ್ತದಿಂದ ಬೊಳುವಾರು ತನಕ ಮಾರ್ಚ್ ಮಾಡಿದ ಪೋಲೀಸರು ಯಾವುದೇ ಸನ್ನಿವೇಶಕ್ಕೂ ಪೋಲೀಸರು ಸಿದ್ಧ ಎನ್ನುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡುವ ಉದ್ಧೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
https://youtu.be/TU1WFQnSjPI
You must be logged in to post a comment Login