Connect with us

    LATEST NEWS

    ಮಂಗಳೂರಿನಲ್ಲಿ ತಾಲಿಬಾನ್ ಪರ ಗೋಡೆ ಬರಹ – ಆರೋಪಿಗಳ ಪತ್ತೆಗೆ ಕದ್ರಿ ಪೋಲೀಸರಿಂದ ಶೋಧ

    ಮಂಗಳೂರು ನವೆಂಬರ್ 27: ಮಂಗಳೂರಿನ ಸರ್ಕೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಒಂದರ ಕಂಪೌಂಡ್ ಮೇಲೆ ತಾಲಿಬಾನ್ ಪರ ಗೋಡೆ ಬರಹ ಹಿನ್ನಲೆ ಆರೋಪಿಗಳ ಪತ್ತೆಗೆ ಕದ್ರಿ ಪೋಲೀಸರಿಂದ ಶೋಧ ಕಾರ್ಯ ಆರಂಭಿಸಿದ್ದಾರೆ.


    ಮಂಗಳೂರಿನ ಸರ್ಕ್ಯೂಟ್‌‌ ಹೌಸ್‌‌ನ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌‌ ಒಂದರ ಕೌಂಪೌಂಡ್‌ನ ಮೇಲೆ ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್‌‌ ಜಿಂದಾಬಾದ್”‌‌‌‌‌ ಎಂದು ಬರೆದಿದ್ದು, “Do not force us to invite Lashkar-e-Toiba and Taliban to Deal with Sanghis and Manvedis” ಎಂದು ಕಿಡಿಗೇಡಿಗಳು ಬರೆದಿದ್ದರು. ಸಂಘ ಪರಿವಾರದ ಮುಖಂಡರಿಗೆ ಎಚ್ಚರಿಕೆ ನೀಡುವ ಬರಹ ರೀತಿ ಇದ್ದು, ನಿಮ್ಮನ್ನು ನಿಯಂತ್ರಣ ಮಾಡೋಕೆ ಲಷ್ಕರ್ ಉಗ್ರರನ್ನು ಆಹ್ವಾನಿಸಬೇಕಾದಿತು, ಉಗ್ರರನ್ನು ಅಹ್ವಾನಿಸುವಂತೆ ಮಾಡಬೇಡಿ, ಲಷ್ಕರ್ ಇ ತೋಯ್ಬಾ ಜಿಂದಾಬಾದ್ ಎಂದು ಬರೆಯಲಾಗಿತ್ತು.


    ಘಟನೆ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಗೋಡೆ ಬರಹವನ್ನು ಅಳಸಿ ಹಾಕಿದ್ದು ಕಿಡಿಗೇಡಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಈಗಾಗಲೇ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿಗಳ ಪರಿಶೀಲನೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ತಡರಾತ್ರಿ 2 ಗಂಟೆಯಿಂದ 4 ಗಂಟೆಯೊಳಗೆ ಈ ಬರಹ ಬರೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply